ಈ ಕ್ಷಣ :

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್​ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಆದರೆ, ಯಾವ ಕ್ಷೇತ್ರದಿಂದ ಎಂಬುದು ಇನ್ನೂ ಅಧಿಕೃತವಾಗಿಲ್ಲವಾದರೂ ರಾಮನಗರದತ್ತ ಎಲ್ಲರ ಚಿತ್ತ ಮೂಡಿದೆ. ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ. ರಾಮನಗರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ವೇ ಮಾಡಿಸಿದ್ದು, ಮುಖಂಡರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರಂತೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಲ ಪೈಪೋಟಿ ನೀಡಲಿದೆ. ಅನಿತಾ ಕುಮಾರಸ್ವಾಮಿಗಿಂತ ನಿಖಿಲ್ ಸ್ಪರ್ಧೆ ಮಾಡಿದರೆ ಸೂಕ್ತ ಎಂಬ ವರದಿ ಬಂದಿದೆಯಂತೆ. ಹಾಗಾಗಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲು ಎಚ್​ಡಿಕೆ ತಯಾರಿ ನಡೆಸಿದ್ದಾರಂತೆ. ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡುವ ಬದಲು 2ನೇ ಪಟ್ಟಿಯಲ್ಲಿ ಘೋಷಣೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಆಯಕ್ಟಿವ್​ ಆಗಿದ್ದು, ಪುತ್ರನಿಗಾಗಿ ಕ್ಷೇತ್ರ ಬಿಟ್ಟಕೊಡಲು ತಂದೆ- ತಾಯಿ ತೀರ್ಮಾನಿಸಿದ್ದಾರೆ.

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ಕೈಲಾಸ: ''ನಾನು ನೂರಾರು ರಾತ್ರಿಗಳನ್ನು ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕಳೆದಿದ್ದೇನೆ. ಯಾವುದೇ ಪ್ಲಾೃನ್ ಇಲ್ಲದೇ ನಾನು ರೈಲು ಹತ್ತಿ ಹೊರಟು ಬಿಡುತ್ತಿದ್ದೆ. ಎಲ್ಲಿ ಹತ್ತುತ್ತೇನೋ ಎಲ್ಲಿ ಇಳಿಯುತ್ತೇನೋ ನನಗೇ ಗೊತ್ತಾಗುತ್ತಿರಲಿಲ್ಲ…'' ಎಂದು ವಿವಾದಿತ ಸ್ವಾಮಿ ನಿತ್ಯಾನಂದ ಹೇಳಿದ್ದಾನೆ. ಆತ ಸ್ವಯಂ ಘೋಷಿತ ಕೈಲಾಸ ದೇಶವನ್ನು ನಿರ್ಮಿಸಿಕೊಂಡು ಅಲ್ಲೇ ವಾಸವಾಗಿರುವುದು ಈಗಾಗಲೇ ನಿಮಗೆಲ್ಲ ಗೊತ್ತಿರುವ ಸಂಗತಿ. ಅಲ್ಲಿ ತನ್ನ ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ಸ್ವಾಮಿ ನಿತ್ಯಾನಂದ, ''ನಾನು ರೈಲಿನಲ್ಲಿ ಹೀಗೆ 9 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಿಗೆ ತಿರುಗಾಡಿದ್ದೇನೆ. ಯಾವತ್ತೂ ನಾನು ರೈಲಿನ ಟಿಕೆಟ್ ಖರೀದಿ ಮಾಡುತ್ತಲೇ ಇರಲಿಲ್ಲ. ಟಿಟಿಗಳು ಟಿಕೆಟ್ ತಪಾಸಣೆ ಮಾಡಲು ಬಂದರೆ ಟಿಕೆಟ್ ಕೇಳುತ್ತಿರಲಿಲ್ಲ. ಬದಲಿಗೆ, ನನ್ನ ಕಾವಿ ಬಟ್ಟೆಯನ್ನು ನೋಡಿ, 'ಬಾಬಾ ಊಟ ಮಾಡಿದ್ರಾ' ಅಂತ ಕೇಳುತ್ತಿದ್ದರು. ಮಾಡಿದ್ದೇನೆ ಎಂದರೆ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದರು. ಊಟ ಆಗಿಲ್ಲ ಎಂದರೆ ಅವರೇ ಊಟವನ್ನು ತಂದುಕೊಡುತ್ತಿದ್ದರು'' ಎಂದು ಹೇಳಿಕೊಂಡಿದ್ದಾನೆ. ''ರೈಲ್ವೆಯಲ್ಲಿರುವ ಜನ ಒಳ್ಳೆಯವರು. ಅದರಲ್ಲೂ ರೈಲ್ವೆ ಇಲಾಖೆಯಲ್ಲಿರುವ ಉತ್ತರ ಭಾರತದ ಮಂದಿ ಬಹಳ ಒಳ್ಳೆಯವರು. ಅವರೆಲ್ಲ ಧಾರ್ಮಿಕ ಮನೋಭಾವದವರು. ಸಂತರು, ಸಾಧುಗಳನ್ನು ಕಂಡರೆ ಸಾಕಷ್ಟು ಮರ್ಯಾದೆ ಕೊಡುತ್ತಾರೆ. ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ ಉತ್ತರ ಭಾರತದವರೇ ನಮ್ಮಂಥ ಕಾವಿಧಾರಿಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಸದ್ಯದಲ್ಲೇ ನಾನು ಇದನ್ನೆಲ್ಲ ನನ್ನ ಜೀವನ ಚರಿತ್ರೆಯಲ್ಲಿ ಬರೆಯುವವನಿದ್ದೇನೆ'' ಎಂದು ನಿತ್ಯಾನಂದ ಹೇಳಿದ್ದಾನೆ.

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾನೆ ಪೊಲೀಸರು ಬಂಧಿಸಿದ್ದಾರೆ. ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ಆರೋಪದ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಬಸವರಾಜನ್, ಸೌಭಗ್ಯ ವಿರುದ್ಧ ದೂರು ದಾಖಲಾಗಿತ್ತು. ನವೆಂಬರ್ 10 ರಂದು ಬಸವರಾಜನ್ ರನ್ನು ಬಂಧಿಸಲಾಗಿತ್ತು. ಸೌಭಾಗ್ಯ ತಲೆಮರೆಸಿಕೊಂಡಿದ್ದರು. ನಿನ್ನೆ ತಡರಾತ್ರಿ ದಾವಣಗೆರೆಯಲ್ಲಿ ಸೌಭಗ್ಯ ಬಸವರಾಜನ್ ರನ್ನು ಬಂಧಿಸಲಾಗಿದೆ. ಸದ್ಯ ಸೌಭಾಗ್ಯ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಇಂದು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ಕೈವ್ ಮೇಲೆ ದಾಳಿ ಮಾಡಲು ರಷ್ಯಾ 200,000 ಸೈನಿಕರನ್ನು ಸಜ್ಜುಗೊಳಿಸುತ್ತದೆ: ಆತಂಕ ವ್ಯಕ್ತಪಡಿಸಿದ ಉಕ್ರೇನ್

ಕೈವ್: ʻಕೈವ್ ಮೇಲೆ ದಾಳಿ ಮಾಡಲು ರಷ್ಯಾ ಸುಮಾರು 200,000 ಹೊಸ ಸೈನಿಕರನ್ನು ಸಿದ್ಧಪಡಿಸುತ್ತಿದೆʼ ಎಂದು ಉಕ್ರೇನ್‌ನ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ವ್ಯಾಲೆರಿ ಜಲುಜ್ನಿ ಅವರು ಹೇಳಿದ್ದಾರೆ. 2023 ರ ಆರಂಭಿಕ ತಿಂಗಳುಗಳಲ್ಲಿ ಕೈವ್ ಮೇಲೆ ಹೊಸ ದಾಳಿಮಾಡಲು ರಷ್ಯಾ ಸಜ್ಜಾಗುತ್ತಿದೆ. ಅವರು ಮತ್ತೆ ಕೈವ್ ನಗರದ ಮೇಲೆ ದಾಳಿ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಗುರುವಾರ ಬಿಡುಗಡೆಯಾದ ದಿ ಎಕನಾಮಿಸ್ಟ್‌ನ ಸಂದರ್ಶನವೊಂದು ತಿಳಿಸಿದೆ. ಇತ್ತೀಚೆಗೆ ಹೆಚ್ಚಿನ ಹೋರಾಟಗಳು ಪೂರ್ವ ಮತ್ತು ದಕ್ಷಿಣದಲ್ಲಿ ಕೇಂದ್ರೀಕೃತವಾಗಿವೆ. ಆದರೆ, ಜನರಲ್ ವ್ಯಾಲೆರಿ ಜಲುಜ್ನಿ ಬ್ರಿಟಿಷ್ ವಾರಪತ್ರಿಕೆಗೆ ಉಕ್ರೇನ್ ರಾಜಧಾನಿ ಕೈವ್ ಯನ್ನು ಮತ್ತೆ ಗುರಿಯಾಗಿಸಲಾಗುತ್ತದೆ ಎಂದು ಹೇಳಿದರು. 'ಬಹಳ ಮುಖ್ಯವಾದ ಕಾರ್ಯತಂತ್ರದ ಕಾರ್ಯವೆಂದರೆ ಮೀಸಲುಗಳನ್ನು ರಚಿಸುವುದು, ಜನವರಿಯ ಕೊನೆಯಲ್ಲಿ ಮತ್ತು ಫೆಬ್ರವರಿಯಲ್ಲಿ ನಡೆಯಬಹುದಾದ ಯುದ್ಧಕ್ಕೆ ತಯಾರಿ ಮಾಡುವುದು, ಮಾರ್ಚ್‌ನಲ್ಲಿ ಅತ್ಯುತ್ತಮವಾಗಿ ಮುಂದುವರೆಸುವುದರ ಬಗ್ಗೆ ಗುರುವಾರ ಬಿಡುಗಡೆ ಮಾಡಿದ ಡಿಸೆಂಬರ್ 3 ರ ಸಂದರ್ಶನದಲ್ಲಿ ಹೇಳಿದರು. 'ರಷ್ಯನ್ನರು ಸುಮಾರು 200,000 ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅವರು ಕೈವ್‌ನಲ್ಲಿ ಮತ್ತೊಮ್ಮೆ ದಾಳಿ ಮಾಡುತ್ತಾರೆ ಎಂದು ನನಗೆ ಯಾವುದೇ ಸಂದೇಹವಿಲ್ಲ. ನಾವು ಎಲ್ಲಾ ಲೆಕ್ಕಾಚಾರಗಳನ್ನು ಮಾಡಿದ್ದೇವೆ. ನಮಗೆ ಎಷ್ಟು ಟ್ಯಾಂಕ್‌ಗಳು, ಫಿರಂಗಿಗಳು ಬೇಕು ಎಂಬುದರ ಬಗ್ಗೆ ಸಿದ್ಧತೆಗಳಾಗಿವೆ' ಎಂದು ಅವರು ಸಂದರ್ಶನದಲ್ಲಿ ಹೇಳಿದರು.

ʼಪಠಾಣ್‌' ಹಾಡಿನ ವಿವಾದ: ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಈಗಲೂ ಪ್ರಶ್ನೆ; ಅಮಿತಾಭ್‌

ಕೋಲ್ಕತಾ: ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಈಗಲು ಪ್ರಶ್ನೆಗಳು ಏಳುತ್ತವೆ ಎಂದು ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಹೇಳಿದರು. ಕೋಲ್ಕತಾದಲ್ಲಿ ನಡೆದ 28ನೇ ಕೋಲ್ಕತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು “ಪಠಾಣ್‌’ ಸಿನಿಮಾದ “ಬೇಷರಮ್‌ ರಂಗ್‌’ ಹಾಡಿನ ದೃಶ್ಯಗಳ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಿದ್ದಾರೆ. “ಸಿನಿಮಾ ಸೆನ್ಸಾರ್‌ಶಿಪ್‌ಗಾಗಿ 1952ರಲ್ಲಿ ಸಿನಿಮಾಟೋಗ್ರಾಫ‌ರ್‌ ಕಾಯಿದೆ ರಚಿಸಲಾಯಿತು. ಫಿಲ್ಮ್ ಸರ್ಟಿಫಿಕಲೇಶನ್‌ ಬೋರ್ಡ್‌ ಸಿನಿಮಾ ಸೆನ್ಸಾರ್‌ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈಗಲೂ ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳು ಏಳುತ್ತವೆ.’ ಎಂದರು. ಇದೇ ವೇಳೆ ಮಾತನಾಡಿದ “ಪಠಾಣ್‌’ ಸಿನಿಮಾ ನಟ ಶಾರುಕ್‌ ಖಾನ್‌, “ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕತೆ ಹರಡುವುದು ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. ಸಂಕುಚಿತ ಮನೋಭಾವದಿಂದ ವಿಚಾರಗಳನ್ನು ನೋಡಲಾಗುತ್ತಿದೆ. ಜಗತ್ತು ಏನಾದರು ಆಗಲಿ, ಆದರೆ ಈಗಲೂ ಸಕಾರಾತ್ಮಕ ವ್ಯಕ್ತಿಗಳು ಜೀವಂತವಾಗಿದ್ದಾರೆ.’ ಎಂದು ಹೇಳಿದರು.

ಶಾಂತಿಪಾಲನೆ ವಿಶ್ವಸಂಸ್ಥೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಸವಾಲಾಗಿದೆ: ಜೈಶಂಕರ್

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಸವಾಲುಗಳು ನಿರಂತರವಾಗಿ ಹೆಚ್ಚುತ್ತಿವೆ. ಸಶಸ್ತ್ರ ಗುಂಪುಗಳು ಮತ್ತು ಭಯೋತ್ಪಾದಕರ ಒಳಗೊಳ್ಳುವಿಕೆ ಜಾಗತಿಕವಾಗಿ ಶಾಂತಿಪಾಲನಾ ಕಾರ್ಯಾಚರಣೆಗಳ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದರ ಬಗ್ಗೆ ವಿಶ್ವಸಂಸ್ಥೆ ಶಾಂತಿಪಾಳಕರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ ಕಳವಳ ವ್ಯಕ್ತಪಡಿಸಿದರು. ವಿಶ್ವಸಂಸ್ಥೆಯ ಶಾಂತಿಪಾಲನೆ ಹಿಂದೆಂದಿಗಿಂತಲೂ ಹೆಚ್ಚು ಸವಾಲಿನಿಂದ ಕೂಡಿದೆ. ಸಶಸ್ತ್ರ ಗುಂಪುಗಳು, ಭಯೋತ್ಪಾದಕರು ಮತ್ತು ಅಂತರರಾಷ್ಟ್ರೀಯ ಸಂಘಟಿತ ಅಪರಾಧಗಳ ಒಳಗೊಳ್ಳುವಿಕೆ ಶಾಂತಿಪಾಲನಾ ಕಾರ್ಯಾಚರಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಎಂದು ಸಚಿವರು ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು. ವಿಶ್ವಸಂಸ್ಥೆಯ ಶಾಂತಿಪಾಲಕರ ವಿರುದ್ಧದ ಅಪರಾಧಗಳನ್ನು ಎತ್ತಿಹಿಡಿಯುವುದು ಬಹು-ಪಾಲುದಾರರ ಕಾರ್ಯವಾಗಿದೆ. ಶಾಂತಿಪಾಲಕರ ವಿರುದ್ಧ ಅಪರಾಧಗಳು ನಡೆದಾಗ ಅಂತಹ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಅಥವಾ ಅಗತ್ಯ ಸಾಮರ್ಥ್ಯ ಆತಿಥೇಯ ರಾಜ್ಯಗಳಿಗಿಲ್ಲ ಎಂದರು. ಕಳೆದ ಮೂರು ವರ್ಷಗಳಲ್ಲಿ 20 ದೇಶಗಳ 68 ಶಾಂತಿಪಾಲಕರು ಶಾಂತಿಗಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತೋರಿಸುತ್ತದೆ ಎಂದು ಜೈಶಂಕರ್ ಹೇಳಿದರು. ವಿಶ್ವಸಂಸ್ಥೆಯ ಶಾಂತಿಪಾಲಕರ ವಿರುದ್ಧದ ಎಲ್ಲಾ ಅಪರಾಧಗಳನ್ನು ದಾಖಲಿಸುವ ಡೇಟಾಬೇಸ್ ಅನ್ನು ಪ್ರಾರಂಭಿಸಲು ಭಾರತವು ಅನುಕೂಲ ಮಾಡಿಕೊಟ್ಟಿದೆ ಮತ್ತು ಶೀಘ್ರದಲ್ಲೇ ಜಾರಿಯಾಗಲಿದೆ ಎಂದರು. ಗಮನಾರ್ಹವಾಗಿ, ಭಾರತವು ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಶಾಂತಿಪಾಲಕರನ್ನು ಕೊಡುಗೆಯಾಗಿ ನೀಡುತ್ತದೆ. ವಿಶ್ವಸಂಸ್ಥೆಯ ಪ್ರಕಾರ, 1948 ರಿಂದ 1000 ಕ್ಕೂ ಹೆಚ್ಚು ಶಾಂತಿಪಾಲಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು 3000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪರಾಧಿಗಳನ್ನು ನ್ಯಾಯಕ್ಕೆ ತರುವಲ್ಲಿ ಗಂಭೀರ ಸವಾಲುಗಳ ಕಾರಣ ಅಂತಹ ಅಪರಾಧಗಳಿಗೆ ಕಾನೂನು ಕ್ರಮ ಜರುಗುಸಿರುವು ಪ್ರಮಾಣ ತುಂಬಾ ಕಡಿಮೆ.

ಗುಡ್ ನ್ಯೂಸ್: ಖಾತೆಗೆ 5 ಸಾವಿರ ರೂ. ವರ್ಗಾವಣೆಗೆ ಇಂದು ಸಿಎಂ ಚಾಲನೆ; ನೇಕಾರ ಸಮ್ಮಾನ್ ಯೋಜನೆಯಡಿ ನೆರವು

ಬೆಂಗಳೂರು: ಕೈಮಗ್ಗ ನೇಕಾರರಿಗೆ ತಲಾ 5000 ರೂ. ಖಾತೆಗೆ ಜಮಾ ಮಾಡಲಾಗುವುದು. ನೇಕಾರ ಸಮ್ಮಾನ್ ಯೋಜನೆಯಡಿ ಈ ವರ್ಷದ ಹಣ ವರ್ಗಾವಣೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ನೇರ ನಗದು ವರ್ಗಾವಣೆಯ ಮೂಲಕ ಕೈಮಗ್ಗ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ತಲಾ 5000 ರೂ. ನಂತೆ 23.43 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದ್ದಾರೆ. ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ನೆರವಾಗಲು ನೇಕಾರ ಸಮ್ಮಾನ್ ಯೋಜನೆಯನ್ನು ಮುಖ್ಯಮಂತ್ರಿಗಳು 2020 -21ನೇ ಸಾಲಿನಿಂದ ಅನ್ವಯವಾಗುವಂತೆ ಘೋಷಣೆ ಮಾಡಿದ್ದು, ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ಇದು ನೆರವಾಗಲಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ಯಾವ ಪಕ್ಷಕ್ಕೆ ಸೇರುತ್ತಾರೆ..? : ಹೊಸ ಸುಳಿವು ನೀಡಿದ ಬಿಎಸ್ವೈ

ಬೆಂಗಳೂರು: ಹಲವು ಕೇಸ್ ಗಳಲ್ಲಿ ಸಿಲುಕಿರುವ ಜನಾರ್ದನ ರೆಡ್ಡಿ 14 ವರ್ಷಗಳ ಕಾಲ ವನವಾಸವನ್ನೇ ಅನುಭವಿಸಿದರು. ಆದರೆ ಈಗ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೀನಿ ಎಂಬ ಪಣ ತೊಟ್ಟಿದ್ದಾರೆ. ಬಿಜೆಪಿಯಿಂದ ಟಿಕೆಟ್ ಗಾಗಿ ತಾಳ್ಮೆಯಿಂದ ಕಾದಿದ್ದಾರೆ. ಆದ್ರೆ ಟಿಕೆಟ್ ಸಿಗದೆ ಇದ್ದಾಗ ರೊಚ್ಚಿಗೆದ್ದ ಜನಾರ್ದನ ರೆಡ್ಡಿ, ಒಂಟಿಯಾಗಿಯೇ ಹೋರಾಟ ಮಾಡಲು ಸಜ್ಜಾಗಿದ್ದರು. ಆಪ್ತ ಮೂಲಗಳ ಪ್ರಕಾರ, ರೆಡ್ಡಿ ಅವರು ಸ್ವತಂತ್ರವಾಗಿಯೇ ಪಕ್ಷ ಕಟ್ಟಿ ನಿಲ್ಲುತ್ತಾರೆ ಎಂಬ ಮಾತು ಇತ್ತು. ಆದ್ರೆ ಇದೀಗ ಮಾಜಿ ಸಿಎಂ ಯಡಿಯೂರಪ್ಪ ಬೇರೆಯದ್ದೆ ವಿಚಾರ ಹೇಳುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರ ಬಗ್ಗೆ ಮಾತನಾಡಿದ ಬಿಎಸ್ವೈ, ಜನಾರ್ದನ ರೆಡ್ಡಿ ಅವರು ಎಲ್ಲಿಯೂ ಹೋಗುವುದಿಲ್ಲ. ಅವರು ಬಿಜೆಪಿಯಲ್ಲಿಯೇ ಇರುತ್ತಾರೆ. ಅವರನ್ನು ನೆಗ್ಲೆಕ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಅವರ ಮೇಲೆ ಕೆಲವು ಪ್ರಕರಣಗಳು ಇದ್ದಾವೆ. ಅದೆಲ್ಲ ಕ್ಲಿಯರ್ ಆಗಬೇಕು. ಆಮೇಲೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಬಳ್ಳಾರಿಗೆ ಹೋಗುವುದಕ್ಕೆ ಜನಾರ್ದನ ರೆಡ್ಡಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಈ ಕಾರಣದಿಂದ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದು, ಅಲ್ಲಿಂದಾನೇ ರಾಜಕೀಯ ವೃತ್ತಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಬಿಎಸ್ವೈ, ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಈ ಗೊಂದಲ ಶುರುವಾಗಿದೆ. ಆದರೆ ಅವರು ಎಲ್ಲೂ ಹೋಗುವುದಿಲ್ಲ ನಮ್ಮ ಜೊತೆಗೆ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಪರೇಷನ್ ಬಾಂಬ್ ಸಿಡಿಸಿದ ಸಚಿವ ಮುನಿರತ್ನ

ಆಪರೇಷನ್ ಬಾಂಬ್ ಸಿಡಿಸಿದ ಸಚಿವ ಮುನಿರತ್ನ
ಕೋಲಾರ: ಕಂದಾಯ ಸಚಿವ ಆರ್.ಅಶೋಕ್ ಆಪರೇಷನ್ ಕಮಲದ ಸುಳಿವು ನೀಡಿದ ಬೆನ್ನಲ್ಲೇ ತೋಟಗಾರಿಕಾ ಸಚಿವ ಮುನಿರತ್ನ 10 ಕಾಂಗ್ರೆಸ್ ನಾಯಕರ ಟೀಂ ನ್ನು ಕರೆತರುತ್ತಿದ್ದೇವೆ ಎಂದು ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಸಮ್ಮಿಶ್ರ ಸರ್ಕಾರ ಇದ್ದಾಗ ನಾವು 17 ಶಾಸಕರು ಬಿಜೆಪಿಗೆ ಬಂದಿದ್ದೆವು. ಈಗ 10 ಶಾಸಕರು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಬಿಜೆಪಿಗೆ ಕರೆತರಲಾಗುವುದು ಎಂದರು. ಒಟ್ಟು 22 ಶಾಸಕರು ರೆಡಿ ಇದ್ದಾರೆ ಅವರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿದ್ದೇವೆ. ಕಾದುನೋಡಿ ಕಾಂಗ್ರೆಸ್ ನ 10 ಶಾಸಕರು ಬಿಜೆಪಿಗೆ ಬರ್ತಾರೆ. ನಮ್ಮ ಹಳೇ ಮಿತ್ರರಾದ ಹತ್ತು ಜನರನ್ನು ಕರೆ ತರುತ್ತಿದ್ದೇವೆ. ಈ ಬಾರಿ ಬಿಜೆಪಿಯವರೇ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದಾರೆ.

ರಾಜ್ಯದ 5 ಲಕ್ಷಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಉದ್ಯೋಗ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ರಾಜ್ಯದ 5 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಸಿಎಂ ಮಾತನಾಡಿದ್ದು, ನಮ್ಮ ಸರ್ಕಾರ ಹೇಳಿಕೆಗೆ ಬದ್ದವಾಗಿದೆ, ರಾಜ್ಯದ 5 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಲಾಗುತ್ತದೆ, ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದೆ ಎಂದು ಹೇಳಿದ್ದಾರೆ. ಅದೇ ರೀತಿ 5 ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರುಗೆ ಉದ್ಯೋಗ ಕೊಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಅಂಜನಾದ್ರಿ ಬೆಟ್ಟದ ರಸ್ತೆಗಳ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ಎಸ್.ಸಿ ಎಸ್ ಟಿ ಸಮುದಾಯದ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿ ಮತ್ತು 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದರು. ಶಾಲೆಗಳಿಗೆ ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಈ ಯೋಜನೆಗೆ ನಮ್ಮ ಸರ್ಕಾರ ಪ್ರಾರಂಭಿಸಿದೆ. 8000 ಶಾಲಾ ಕೊಠಡಿಗಳ ನಿರ್ಮಾಣದ ಗುರಿಯಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಇದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಿದಂತಾಗುತ್ತದೆ ಎಂದು ಹೇಳಿದ್ದರು. ಇಂದು ಕೂಡ ಕೊಪ್ಪಳದಲ್ಲಿ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಚುನಾವಣಾ ಸಮಿತಿಯಲ್ಲಿ ರಮೇಶ್ ಕುಮಾರ್ ಗಿಲ್ಲ ಸ್ಥಾನ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಹಂಚಿಕೆ ಸಮಿತಿ ರಚನೆ ಮಾಡಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕಮಿಟಿಯಲ್ಲಿ ಸ್ಥಾನ ನೀಡದೇ ಕೆ.ಹೆಚ್. ಮುನಿಯಪ್ಪಗೆ ಮಣೆ ಹಾಕಲಾಗಿದೆ. 36 ಜನರನ್ನೊಳಗೊಂಡ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆಯಾಗಿದ್ದು, ಸಮಿತಿಯಲ್ಲಿ ರಮೇಶ್ ಕುಮಾರ್ ಹೆಸರು ಕೈಬಿಡಲಾಗಿದೆ. ಕೆ.ಹೆಚ್. ಮುನಿಯಪ್ಪ ಅವರಿಗೆ ಸ್ಥಾನ ನೀಡಲಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಮುನಿಯಪ್ಪ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಕೆ.ಹೆಚ್. ಮುನಿಯಪ್ಪ ಮತ್ತಷ್ಟು ಪ್ರಭಾವಶಾಲಿಯಾಗಿದ್ದು, ರಮೇಶ್ ಕುಮಾರ್ ಅವರನ್ನು ಕಡೆಗಣಿಸಿ ಅವರಿಗಿಂತ ಕಿರಿಯರಿಗೆ ಎಲೆಕ್ಷನ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್​ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಆದರೆ, ಯಾವ ಕ್ಷೇತ್ರದಿಂದ ಎಂಬುದು ಇನ್ನೂ ಅಧಿಕೃತವಾಗಿಲ್ಲವಾದರೂ ರಾಮನಗರದತ್ತ ಎಲ್ಲರ ಚಿತ್ತ ಮೂಡಿದೆ. ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ. ರಾಮನಗರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ವೇ ಮಾಡಿಸಿದ್ದು, ಮುಖಂಡರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರಂತೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಲ ಪೈಪೋಟಿ ನೀಡಲಿದೆ. ಅನಿತಾ ಕುಮಾರಸ್ವಾಮಿಗಿಂತ ನಿಖಿಲ್ ಸ್ಪರ್ಧೆ ಮಾಡಿದರೆ ಸೂಕ್ತ ಎಂಬ ವರದಿ ಬಂದಿದೆಯಂತೆ. ಹಾಗಾಗಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲು ಎಚ್​ಡಿಕೆ ತಯಾರಿ ನಡೆಸಿದ್ದಾರಂತೆ. ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡುವ ಬದಲು 2ನೇ ಪಟ್ಟಿಯಲ್ಲಿ ಘೋಷಣೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಆಯಕ್ಟಿವ್​ ಆಗಿದ್ದು, ಪುತ್ರನಿಗಾಗಿ ಕ್ಷೇತ್ರ ಬಿಟ್ಟಕೊಡಲು ತಂದೆ- ತಾಯಿ ತೀರ್ಮಾನಿಸಿದ್ದಾರೆ.
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
ಕೈಲಾಸ: ''ನಾನು ನೂರಾರು ರಾತ್ರಿಗಳನ್ನು ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕಳೆದಿದ್ದೇನೆ. ಯಾವುದೇ ಪ್ಲಾೃನ್ ಇಲ್ಲದೇ ನಾನು ರೈಲು ಹತ್ತಿ ಹೊರಟು ಬಿಡುತ್ತಿದ್ದೆ. ಎಲ್ಲಿ ಹತ್ತುತ್ತೇನೋ ಎಲ್ಲಿ ಇಳಿಯುತ್ತೇನೋ ನನಗೇ ಗೊತ್ತಾಗುತ್ತಿರಲಿಲ್ಲ…'' ಎಂದು ವಿವಾದಿತ ಸ್ವಾಮಿ ನಿತ್ಯಾನಂದ ಹೇಳಿದ್ದಾನೆ. ಆತ ಸ್ವಯಂ ಘೋಷಿತ ಕೈಲಾಸ ದೇಶವನ್ನು ನಿರ್ಮಿಸಿಕೊಂಡು ಅಲ್ಲೇ ವಾಸವಾಗಿರುವುದು ಈಗಾಗಲೇ ನಿಮಗೆಲ್ಲ ಗೊತ್ತಿರುವ ಸಂಗತಿ. ಅಲ್ಲಿ ತನ್ನ ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ಸ್ವಾಮಿ ನಿತ್ಯಾನಂದ, ''ನಾನು ರೈಲಿನಲ್ಲಿ ಹೀಗೆ 9 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಿಗೆ ತಿರುಗಾಡಿದ್ದೇನೆ. ಯಾವತ್ತೂ ನಾನು ರೈಲಿನ ಟಿಕೆಟ್ ಖರೀದಿ ಮಾಡುತ್ತಲೇ ಇರಲಿಲ್ಲ. ಟಿಟಿಗಳು ಟಿಕೆಟ್ ತಪಾಸಣೆ ಮಾಡಲು ಬಂದರೆ ಟಿಕೆಟ್ ಕೇಳುತ್ತಿರಲಿಲ್ಲ. ಬದಲಿಗೆ, ನನ್ನ ಕಾವಿ ಬಟ್ಟೆಯನ್ನು ನೋಡಿ, 'ಬಾಬಾ ಊಟ ಮಾಡಿದ್ರಾ' ಅಂತ ಕೇಳುತ್ತಿದ್ದರು. ಮಾಡಿದ್ದೇನೆ ಎಂದರೆ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದರು. ಊಟ ಆಗಿಲ್ಲ ಎಂದರೆ ಅವರೇ ಊಟವನ್ನು ತಂದುಕೊಡುತ್ತಿದ್ದರು'' ಎಂದು ಹೇಳಿಕೊಂಡಿದ್ದಾನೆ. ''ರೈಲ್ವೆಯಲ್ಲಿರುವ ಜನ ಒಳ್ಳೆಯವರು. ಅದರಲ್ಲೂ ರೈಲ್ವೆ ಇಲಾಖೆಯಲ್ಲಿರುವ ಉತ್ತರ ಭಾರತದ ಮಂದಿ ಬಹಳ ಒಳ್ಳೆಯವರು. ಅವರೆಲ್ಲ ಧಾರ್ಮಿಕ ಮನೋಭಾವದವರು. ಸಂತರು, ಸಾಧುಗಳನ್ನು ಕಂಡರೆ ಸಾಕಷ್ಟು ಮರ್ಯಾದೆ ಕೊಡುತ್ತಾರೆ. ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ ಉತ್ತರ ಭಾರತದವರೇ ನಮ್ಮಂಥ ಕಾವಿಧಾರಿಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಸದ್ಯದಲ್ಲೇ ನಾನು ಇದನ್ನೆಲ್ಲ ನನ್ನ ಜೀವನ ಚರಿತ್ರೆಯಲ್ಲಿ ಬರೆಯುವವನಿದ್ದೇನೆ'' ಎಂದು ನಿತ್ಯಾನಂದ ಹೇಳಿದ್ದಾನೆ.
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾನೆ ಪೊಲೀಸರು ಬಂಧಿಸಿದ್ದಾರೆ. ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ಆರೋಪದ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಬಸವರಾಜನ್, ಸೌಭಗ್ಯ ವಿರುದ್ಧ ದೂರು ದಾಖಲಾಗಿತ್ತು. ನವೆಂಬರ್ 10 ರಂದು ಬಸವರಾಜನ್ ರನ್ನು ಬಂಧಿಸಲಾಗಿತ್ತು. ಸೌಭಾಗ್ಯ ತಲೆಮರೆಸಿಕೊಂಡಿದ್ದರು. ನಿನ್ನೆ ತಡರಾತ್ರಿ ದಾವಣಗೆರೆಯಲ್ಲಿ ಸೌಭಗ್ಯ ಬಸವರಾಜನ್ ರನ್ನು ಬಂಧಿಸಲಾಗಿದೆ. ಸದ್ಯ ಸೌಭಾಗ್ಯ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಇಂದು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.
Published 16 ಮಾರ್ಚ್ 2023, 14:45

ಜಿಲ್ಲೆ

ಇನ್ನಷ್ಟು

ರಾಜ್ಯ

ಕ್ರೀಡೆ

ವಾಣಿಜ್ಯ

ಇನ್ನಷ್ಟು

ಭವಿಷ್ಯ

ನಿಮ್ಮ ರಾಶಿ ಭವಿಷ್ಯ ಗ್ರಹ-ಗತಿಗಳ ಚಲನೆಯ ಪ್ರಕಾರ ಗಣನೆ ಮಾಡಲಾಗುವ ಜ್ಯೋತಿಷ ಶಾಸ್ತ್ರದ ಆಧಾರದಲ್ಲಿ ಹನ್ನೆರಡು ರಾಶಿಗಳ ಭವಿಷ್ಯ ಹೇಗಿದೆ? ಇಂದಿನ ಭವಿಷ್ಯದ ಜೊತೆಗೆ ವಾರಭವಿಷ್ಯ, ಮಾಸ ಭವಿಷ್ಯ ಹಾಗೂ ವರ್ಷ ಭವಿಷ್ಯ ತಿಳಿಯಿರಿ!

ಕಲೆ/ ಸಾಹಿತ್ಯ

ಇನ್ನಷ್ಟು

ಕವಿತೆ

ಕವಿತೆ
Published 16 ಮಾರ್ಚ್ 2023, 14:27

ಕವಿತೆ

ಕವಿತೆ
Published 16 ಮಾರ್ಚ್ 2023, 14:27

ಸಾಹಿತ್ಯ ಸಾಧಕಿ ಗೊರೂರು ಪಂಕಜರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ

ಸನ್ಯಾಸಿ ಆಶೀರ್ವಾದ

ಸನ್ಯಾಸಿ ಆಶೀರ್ವಾದ
Published 16 ಮಾರ್ಚ್ 2023, 14:27