ಜ್ಯೋತಿಷ್ಯದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ

ಮೇಷ ರಾಶಿ :  ಒಳ್ಳೆಯ ಜನರೊಂದಿಗೆ ಸ್ನೇಹವನ್ನು ಬೆಳೆಸಿ. ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಬೇಡ. ಆರೋಗ್ಯದಲ್ಲಿ ಸ್ವಲ್ಪ ಏರು-ಪೇರಾಗುವ ಸಾಧ್ಯತೆಗಳಿವೆ. ಗಣಿಕಾರಿಕೆ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ. ಪಾಲುದಾರಿಕೆ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಿ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.

ವೃಷಭ ರಾಶಿ : ಈ ದಿನ ನಿಮಗೆ ಉತ್ತಮವಾಗಿದೆ. ಕ್ರೀಡೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ  ಪರೀಕ್ಷೆಯ ಭಯ ಬೇಡ. ಇಂದು ನೀವು ಸಹೋದರ, ಸಹೋದರಿಗೆ ಸಹಾಯವನ್ನು ಮಾಡುತ್ತೀರಿ. ದೀರ್ಘಕಾಲೀನ ಖಾಯಿಲೆಯಿಂದ ಬಳಲುತ್ತಿರುವವರು ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಉತ್ತಮ.

ಮಿಥುನ ರಾಶಿ : ಅವಿವಾಹಿತರಿಗೆ ಇಂದು ವಿವಾಹ ಕೂಡಿ ಬರುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಸದಸ್ಯರಿಗೆ ಪ್ರಾಮುಖ್ಯತೆಯನ್ನು ನೀಡಿ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸುವುದು ಅಗತ್ಯ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತೀರ. ಅಪರಿಚಿತರ ಜೊತೆ ಎಚ್ಚರವಾಗಿರಿ. ಹೊಸ ಉದ್ಯೋಗಕ್ಕೆ ಆಹ್ವಾನ ಬರುತ್ತದೆ.

ಕರ್ಕ ರಾಶಿ : ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ಏಳಿಗೆ ಇದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಂಜೆಯನ್ನು ಕಳೆಯುತ್ತೀರಿ. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ನಿಮ್ಮ ತಾತನ ಆಸ್ತಿ  ಇಂದು ನಿಮ್ಮ ಕೈಸೇರಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ತಂದೆಯ ಆರೋಗ್ಯದ ಕಡೆ ಗಮನ ವಿರಲಿ.

ಸಿಂಹ ರಾಶಿ : ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಉತ್ತಮವಾದ ಪ್ರೀತಿಯ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಒಡಹುಟ್ಟಿದವರೊಂದಿಗಿನ ಜಗಳ,ಮನಸ್ತಾಪ ಉಂಟಾಗಬಹುದು. ಅನೀರೀಕ್ಷಿತವಾಗಿ ಆರಂಭಗೊಂಡ ವ್ಯಾಪಾರಗಳು ಕೆಲವರಿಗೆ ಲಾಭವನ್ನು ತಂದುಕೊಡುತ್ತದೆ.

ಕನ್ಯಾ ರಾಶಿ : ಹೊಸ ಮೂಲಗಳಿಂದ ಆದಾಯದ ಬರುತ್ತವೆ. ವ್ಯಾಪಾರಿಗಳು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ವಿದೇಶ ಪ್ರಯಾಣದ ಯೋಗವಿದೆ. ಗೃಹ ನಿರ್ಮಾಣಕ್ಕೆ ಇದ್ದ ಅಡ್ಡಿ-ಆತಂಕಗಳು ನಿವಾರಣೆ ಆಗುತ್ತವೆ. ಹಿರಿಯರ ಸಲಹೆಗಳು ನಿಮ್ಮ ವ್ಯವಹಾರಕ್ಕೆ ಉತ್ತಮ ಮಾರ್ಗದರ್ಶನವಾಗುತ್ತದೆ. ಇಂದು ಶೀತಬಾಧೆಯಿಂದ ನರಳುತ್ತೀರಿ.

ತುಲಾ ರಾಶಿ:  ನಿಮ್ಮ ಆತ್ಮವಿಶ್ವಾಸಭರಿತ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಹಾಯ ಮಾಡುತ್ತವೆ. ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಅವಕಾಶವಿದೆ. ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದಲ್ಲಿ ಅವರ ಗೌರವಕ್ಕೆ ಕುಂದು ಬರಬಹುದು. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಒಳ್ಳೆಯ ದಿನ.

ವೃಶ್ಚಿಕ ರಾಶಿ : ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಸಾಧಿಸುತ್ತೀರಿ. ನಿಮ್ಮ ಆರೋಗ್ಯದ ಕಡೆ ಗಮನಕೊಡಿ. ಕೃಷಿಗೆ ಸಂಬಂಧಪಟ್ಟ ಯಂತ್ರೋಪಕರಣಗಳನ್ನು ಮಾರುವವರಿಗೆ ಉತ್ತಮ ಲಾಭವಿದೆ. ಮೂಳೆ ತೊಂದರೆ ಇರುವವರು ಹುಷಾರಾಗಿರಿ. ಅವಿವಾಹಿತರಿಗೆ ವಿವಾಹದ ಯೋಗವಿದೆ.

ಧನು ರಾಶಿ : ಇವತ್ತಿನ ದಿನ ಮಂದಗತಿಯಲ್ಲಿ ಸಾಗುತ್ತದೆ. ಧ್ಯಾನ ಮತ್ತು ಯೋಗ ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚು ಮಾಡುತ್ತದೆ. ಇಂದು ನಿಮಗೆ ಕೆಲವು ಮೂಲಗಳಿಂದ ಹಣವು ಬರಲಿದೆ, ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಪೋಷಕರ ಆರೋಗ್ಯವು ಸುಧಾರಿಸುತ್ತದೆ.

ಮಕರ ರಾಶಿ : ನಿಮ್ಮ  ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುತ್ತದೆ ತಾಳ್ಮೆಯಿಂದಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ಅದೃಷ್ಟವು ನಿಮ್ಮ ಪರವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಇಂದು ಭೇಟಿ ನೀಡುತ್ತೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಸೃಷ್ಟಿಯಾಗಬಹುದು.

ಕುಂಭ ರಾಶಿ : ಸಂಗಾತಿಯೊಂದಿಗಿನ ಜೀವನ ಉತ್ತಮವಾಗಿರುತ್ತದೆ. ಸಮಾಜದ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಗೌರವ ಕೆಲವರಿಗೆ ದೊರೆಯುತ್ತದೆ. ನಿಮ್ಮ ಬಿಡುವಿನ ಸಮಯದಲ್ಲಿ ಮಕ್ಕಳ ಜೊತೆ ಕಾಲ ಕಳೆಯಲು ಪ್ರಯತ್ನಿಸಿ.

ಮೀನ ರಾಶಿ  : ಇಂದು ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿರುವಂತೆ ತೋರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಬಹುದು. ಸಾವಯವ ಕೃಷಿಕರಿಗೆ ಹೆಚ್ಚಿನ ಲಾಭ ಸಿಗುವಂತ ದಿನ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ಇವತ್ತು ನಿಮಗೆ ಆಯಾಸದ ದಿನ.

Spread the love

Related Articles

Leave a Reply

Your email address will not be published.

Back to top button