ಮಂತ್ರ ಪಠಣ

ಶ್ಲೋಕ ಪಠಣದಿಂದ ಆಗುವ ಪ್ರಯೋಜನಗಳು

 • ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
 • ದೇಹದಲ್ಲಿ ಹಲವು ಶಕ್ತಿಕೇಂದ್ರಗಳು ಅಥವಾ ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.
 • ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ.
 • ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ.
 • ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ.
 • ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ.
 • ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ.
 • ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ.
 • ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
 • ಮನಸ್ಸು ನಿರಾಳವಾಗುತ್ತದೆ – ಮನಸ್ಸು ಉದ್ವೇಗಗೊಂಡಿದ್ದಾಗ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.
 • ಖಿನ್ನತೆಯನ್ನು ನಿವಾರಿಸುತ್ತದೆ, ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವುಗಳನ್ನು ಮಂತ್ರ ಪಠಿಸುವ ಮೂಲಕ ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.
 • ತೇಜಸ್ಸನ್ನು ಹೆಚ್ಚಿಸುತ್ತದೆ- ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸುವಾಗ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ.
Spread the love

Related Articles

Leave a Reply

Your email address will not be published.

Back to top button