ಮೆಟ್ರೋ

ಕೇಳಿದಷ್ಟು ಹಣ ಕೊಡದಿದ್ದಕ್ಕೆ ದಾರಿಯಲ್ಲೇ ಹೆಣ ಇರಿಸಿಹೋದ ಅಂಬ್ಯುಲೆನ್ಸ್ ಚಾಲಕ

ಬೆಂಗಳೂರು: ಕೊವಿಡ್ ಕಷ್ಟದ ಹೊತ್ತಲ್ಲಿ ಕೆಲವರಂತೂ ಹಣ ಮಾಡಿಕೊಳ್ಳುವ ದಂಧೆಗೆ ಬಿದ್ದಿದ್ದಾರೆ ಎನ್ನುವುದೇನೂ ಗುಟ್ಟಾಗಿಲ್ಲ. ಇದರಲ್ಲಿ ಅಂಬುಲೆನ್ಸ್ ಚಾಲಕರೂ ಕಡಿಮೆಯೇನಿಲ್ಲ.

ಕೇಳಿದಷ್ಟು ಹಣ ನೀಡಿಲ್ಲವೆಂಬ ಕಾರಣಕ್ಕೆ ಕೋವಿಡ್ ರೋಗಿಯ ಮೃತದೇಹವನ್ನು ಮಾರ್ಗದಲ್ಲೇ ಇರಿಸಿಹೋಗಿದ್ದ ಆರೋಪದಡಿ ಆಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಜಯನಗರ 9ನೇ ಬ್ಲಾಕ್‌ನಲ್ಲಿರುವ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್‌ನಿಂದ ಹೆಬ್ಬಾಳಿನ ಚಿರಶಾಂತಿಧಾಮ ಎಲೆಕ್ಟ್ರಿಕ್ ಕ್ರೆಮಟೋರಿಯಂಗೆ ಶವವನ್ನು ಸಾಗಿಸಲು ಈ ಆರೋಪಿ ಆಂಬುಲೆನ್ಸ್ ಚಾಲಕ ಭಾರೀ ಹಣ ಕೇಳಿದ್ದಾನೆ. 18,000 ರೂ. ಕೇಳಿದ್ದು, ಹಣ ನೀಡಿಲ್ಲವೆಂದು ಶವವನ್ನು ದಾರಿಯಲ್ಲೇ ಬಿಟ್ಟು ಹೋಗಿದ್ದ.

ಈ ಆರೋಪದಲ್ಲಿ ಚಾಲಕ ಶರತ್‌ ಗೌಡನನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ

Spread the love

Related Articles

Leave a Reply

Your email address will not be published. Required fields are marked *

Back to top button