ಮೆಟ್ರೋ
ಕೆಂಪೇಗೌಡ ಏರ್ಪೋರ್ಟ್ ಬಳಿ ಸ್ಫೋಟ; 4 ಕಾರ್ಮಿಕರಿಗೆ ಗಾಯ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರಸ್ತೆ ಕಾಮಗಾರಿ ನಡೆಯುತ್ತಿದ್ದ ಅಂಡರ್ ಪಾಸ್ನಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ. ರಸ್ತೆಗೆ ಬಣ್ಣದ ಪಟ್ಟಿ ಬಳಿಯುವುದಕ್ಕೆ ಸಂಬಂಧಿಸಿದ ರಾಸಾಯನಿಕ ಮಿಶ್ರಣ ಮಾಡುವ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಿಸಿ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ, ಎರಡನೇ ಟರ್ಮಿನಲ್ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ನಡೆಯುತ್ತಿದ್ದ ಹೊಸ ರಸ್ತೆ ಕಾಮಗಾರಿ ಸ್ಥಳದಲ್ಲಿ ರಸ್ತೆಗೆ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕಲಾಗುತ್ತಿದ್ದ, ಕೆಳ ಸೇತುವೆಯಲ್ಲಿ ರಸ್ತೆಗೆ ಬಳಿಯಬೇಕಾದ ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಗ್ಯಾಸ್ ಸಿಲಿಂಡರ್ ಬಳಸಿ ಕಾಯಿಸುತಿದ್ದಾಗ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕೆಳ ಸೇತುವೆ ಆವರಿಸಿ ಆತಂಕಕ್ಕೆ ಕಾರಣವಾಯಿತು.
ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.