
ಕೊರೊನಾ ಲಸಿಕೆ ನಾಗರಿಕರ ಹಕ್ಕು ಪ್ರತಿಯೊಬ್ಬರಿಗೂ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಬೇಕು, ರಾಜ್ಯದಲ್ಲಿ ಜೂನ್ ಅಂತ್ಯ ದೊಳಗೆ ಪ್ರತಿಯೊಬ್ಬರಿಗೂ, ಕೋವಿಡ್ ಲಸಿಕೆಯ ಮೊದಲ ಡೋಸ್ ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ಕೊಡಬೇಕು, ಮತ್ತು ನಾಗರಿಕರು ನಡೆದುಕೊಂಡು ಹೋಗಿ ಲಸಿಕೆ ಪಡೆಯುವಷ್ಟು ಹತ್ತಿರದಲ್ಲಿ ಲಸಿಕೆ ಬೂತ್ ಸ್ಥಾಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಆಗ್ರಹಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ 1900 ರಿಂದ 3000 ಸಾವಿರದ ವರೆಗೂ ಹಣ ಪಡೆದು ಲಸಿಕೆ ಮಾರಾಟ ದಂಧೆ ನಡೆಯುತ್ತಿದೆ, ಲಕ್ಷಾಂತರ ಬಡ ಜನರು ಕೋವಿಡ್ ಲಸಿಕೆ ಪಡೆಯಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಅದ್ದರಿಂದ ಪ್ರತಿಯೊಬ್ಬರಿಗೂ ಸರ್ಕಾರ ಉಚಿತವಾಗಿ ಲಸಿಕೆ ಕೊಡಬೇಕು ಇಲ್ಲವೇ ಕುರ್ಚಿ ಬಿಟ್ಟು ಇಳಿಯಬೇಕು ಎಂದು ಆಗ್ರಹಿಸಿ ಜೂ 10 ರಂದು ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡರ ಜನ್ಮ ದಿನದಂದು ಲಕ್ಷಾಂತರ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಸಣ್ಣೀರಪ್ಪ ತಿಳಿಸಿದ್ದಾರೆ.