Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ನ. 27 ರಂದು ಪ್ರಲ್ಹಾದ ಜೋಶಿ ಜನ್ಮದಿನ -ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್, ಸಂಭ್ರಮಾಚರಣೆ ಬೇಡ ಎಂದು ಜೋಶಿ ಮನವಿ

ಧಾರವಾಡ: ಇದೇ ನವೆಂಬರ್ 27ರಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ತಮ್ಮ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ವಿನಮ್ರ ವಿನಂತಿಯ ಸಂದೇಶವೊಂದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ರವಾನಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಲ್ಹಾದ ಜೋಶಿಯವರು ಜನ್ಮದಿನದಂದು ಯಾವುದೇ ಸಂಭ್ರಮಾಚರಣೆ ಮಾಡುತ್ತಿಲ್ಲ. ಹೀಗಾಗಿ ಕಾರ್ಯಕರ್ತರು ಯಾವುದೇ ಬ್ಯಾನರ್ ಅಥವಾ ಹೋರ್ಡಿಂಗ್​​ಗಳನ್ನು ಅಳವಡಿಸಿ ದುಂದು ವೆಚ್ಚ ಮಾಡಬಾರದೆಂದು ಸಚಿವ ಪ್ರಲ್ಹಾದ ಜೋಶಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

ಸಾರ್ವಜನಿಕರ ಆಶೀರ್ವಾದ ಹಾಗೂ ಪ್ರೀತಿಯೇ ಶುಭಾಶಯ ಎಂದಿರುವ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಎಂದಿನ ಸರಳತೆಯ ಸಂಪ್ರದಾಯ ಮುಂದುವರಿಸಿದ್ದಾರೆ. 59 ವರ್ಷದ ಪ್ರಲ್ಹಾದ ಜೋಶಿಯವರು 1962ರ ನವೆಂಬರ್ 27ರಂದು ವಿಜಯಪುರದಲ್ಲಿ ಜನಿಸಿದರು. ಪ್ರಸ್ತುತ ಅವರು ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಮಾಡಿರುವ ಮನವಿಯ ಪೂರ್ಣಪಾಠ ಇಲ್ಲಿದೆ :

ನನ್ನೆಲ್ಲಾ ಬಂಧುಗಳಿಗೂ ನನ್ನ ವಿನಂತಿ.
ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಜನ್ಮದಿನದಂದು ಯಾವುದೇ ಆಚರಣೆ, ಸಂಭ್ರಮ ಇರುವುದಿಲ್ಲ. ಆದ್ದರಿಂದ ಕಾರ್ಯಕರ್ತರು ಯಾವುದೇ ಬ್ಯಾನರ್ ಅಥವಾ ಹೋರ್ಡಿಂಗ್​​ಗಳನ್ನು ಅಳವಡಿಸಿ ದುಂದು ವೆಚ್ಚ ಮಾಡಬಾರದಾಗಿ ಕಳಕಳಿಯ ವಿನಂತಿ.

ನಿಮ್ಮೆಲ್ಲರ ಆಶೀರ್ವಾದ ಪ್ರೀತಿ ನನ್ನ ಪಾಲಿಗೆ ಶುಭಾಶಯ.

Spread the love

Related Articles

Leave a Reply

Your email address will not be published.

Back to top button