Breaking NewsLatestರಾಜ್ಯಸುದ್ದಿ
ನಾಗೇಶ ನರಳಿ, ನರಳಿ ಸಾಯಬೇಕು ಅಂತಹ ಶಿಕ್ಷೆ ಕೊಡಿ: ಯುವತಿಯ ಪೋಷಕರ ಅಳಲು

ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಪೋಷಕರು ಕೊಂಚ ನೆಮ್ಮದಿಯಾಗಿದ್ದಾರೆ. ಕಳೆದ 16 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸಿಕ್ಕಿ ಬಿದಿದ್ದಾನೆ. ಇದೀಗ ಯುವತಿಯ ಪೋಷಕರು ದಾಳಿಕೋರನಿಗೆ ತಕ್ಕ ಶಿಕ್ಷೆ ಆಗ್ಬೇಕು. ಆತನನ್ನ ಚಿತ್ರಹಿಂಸೆ ನೀಡಿ ಸಾಯಿಸಿ ಎಂದು ಆಗ್ರಹಿಸಿದ್ದಾರೆ.
ಆರೋಪಿ ನಾಗೇಶ 16 ದಿನಗಳ ಬಳಿಕ ತಮಿಳುನಾಡಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇತ್ತ ಮಗಳ ಸ್ಥಿತಿ ಕಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಯುವತಿಯ ಕುಟುಂಬಸ್ಥರು ಆ್ಯಸಿಡ್ ನಾಗನಿಗೆ ತಕ್ಕ ಶಿಕ್ಷೆ ಆಗಬೇಕು. ಅವನನ್ನ ಒಂದೇ ಸಲ ಸಾಯಿಸಬೇಡಿ, ಆತ ನರಳಿ ನರಳಿ ಸಾಕಬೇಕು. ಅಂತಹ ಶಿಕ್ಷೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನ ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ, ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರ ಶಿಕ್ಷೆ ಕೊಡಬೇಕು. ನಾಗೇಶನ ಕಾಲು ಮುರಿದು ಭಿಕ್ಷೆ ಬೇಡಲು ಹಾಕ್ಬೇಕು. ನನ್ನ ಮಗಳ ಮುಖ ನೋಡಿ 15 ದಿನಗಳಾಯ್ತು ಅಂತ ಯುವತಿಯ ದೊಡ್ಡಮ್ಮ ಕಣ್ಣೀರು ಹಾಕಿದ್ದಾರೆ.