Breaking NewsLatestಬಾಲಿವುಡ್ರಾಜ್ಯರಾಷ್ಟ್ರೀಯಸಿನಿಮಾಸುದ್ದಿಸ್ಯಾಂಡಲ್ ವುಡ್

ಬಾಲಿವುಡ್‌ಗೆ ಹೋಗಲು ಸಜ್ಜಾದ್ರಾ ನಟ ರಿಷಬ್ ಶೆಟ್ಟಿ!?

ಇತ್ತೀಚಿನ ಕನ್ನಡ ಚಲನಚಿತ್ರೋದ್ಯಮದ ಸೂಪರ್‌ ಹಿಟ್‌ ಸಿನಿಮಾ ಕಾಂತಾರ, ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಅತಿದೊಡ್ಡ ಹಿಟ್‌ ಪಡೆದ ಸಿನಿಮಾಗಳಲ್ಲಿ ಒಂದಾಗಿದೆ.

ಅಲ್ಲದೇ ಹಿಂದಿ ಮತ್ತು ತೆಲುಗು ಆವೃತ್ತಿಯಲ್ಲೂ ಸಿನಿ ಪ್ರಿಯರ ಮನಗೆದ್ದಿದೆ. ಕಾಂತಾರ ಸಿನಿಮಾದ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿಗೆ ಭಾರತದ ಎಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ.

ಟೈಮ್ಸ್ ನೌ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ತನ್ನನ್ನು “ಹೆಮ್ಮೆಯ ಕನ್ನಡಿಗ” ಎಂದು ಕರೆದುಕೊಂಡಿದ್ದಾರೆ. ತಾವು ಕನ್ನಡ ಚಲನಚಿತ್ರಗಳನ್ನು ಮಾತ್ರ ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಏಕೆಂದರೆ ಕನ್ನಡ ಚಲನಚಿತ್ರೋದ್ಯಮ ಮತ್ತು ಕನ್ನಡಿಗರೇ ತಾವು ಇಂದು ಇಲ್ಲಿರಲು ಕಾರಣ ಎಂದು ಒತ್ತಿ ಹೇಳಿದ್ದಾರೆ. ಒಂದು ಚಿತ್ರವು ಬೇರೆಡೆ ಹಿಟ್ ಆದ ನಂತರ, ಅವರ ಕುಟುಂಬ ಮತ್ತು ಸ್ನೇಹಿತರು ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಬದಲಾಗುವುದಿಲ್ಲ ಎಂದಿದ್ದಾರೆ.

ರಿಷಬ್ ಶೆಟ್ಟಿ ಅವರು ಪ್ರಾದೇಶಿಕತೆಯು ಹೆಚ್ಚು ಸಾರ್ವತ್ರಿಕವಾಗಿದೆ ಎಂದು ನಾನು ನಂಬುತ್ತೇನೆ. ಜನರು ಇಷ್ಟಪಟ್ಟರೆ ಹಿಂದಿ ಬೆಲ್ಟ್‌ನಲ್ಲಿ ತನ್ನ ವಿಷಯವನ್ನು ಪ್ರಸ್ತುತಪಡಿಸುವುದನ್ನು ಮುಂದುವರಿಸುತ್ತೇನೆ. ಆದರೆ ಕನ್ನಡ ಸಿನಿರಂಗದಲ್ಲಿ ಮಾತ್ರ ಚಿತ್ರಗಳನ್ನು ಮಾಡುತ್ತೇನೆ ಎಂದು ರಿಷಬ್‌ ಶೆಟ್ಟಿ ಹೇಳಿದರು.

Spread the love

Related Articles

Leave a Reply

Your email address will not be published.

Back to top button