Breaking NewsLatestರಾಷ್ಟ್ರೀಯಸುದ್ದಿ

ಮಹಿಳಾ ಅಭಿಮಾನಿಯ ಕಾಲಿಗೆ ಬಿದ್ದ ನಟ ರಿತೇಶ್​ ದೇಶ್​ಮುಖ್​! 

ಮುಂಬೈ: ತುಂಬಾ ವರ್ಷಗಳ ಬಳಿಕ ಬಾಲಿವುಡ್​​ ನಟ ರಿತೇಶ್​ ದೇಶ್​ಮುಖ್ ಮತ್ತು ಪತ್ನಿ ಜೆನಿಲಿಯಾ ಡಿಸೋಜಾ ಅವರು ಹೊಸ ಸಿನಿಮಾವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಹೆಸರು ‘ವೇದ್​’. ಇದನ್ನು ಮರಾಠಿ ಭಾಷೆಯಲ್ಲಿ ರಿತೇಶ್​ ಅವರೇ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾ ತೆಲುಗಿನ ಮಜಿಲಿ ಚಿತ್ರದ ರಿಮೇಕ್​ ಆಗಿದ್ದು, ಡಿಸೆಂಬರ್​ 30ಕ್ಕೆ ತೆರೆಗೆ ಅಪ್ಪಳಿಸಲಿದೆ.

ರಿತೇಶ್​ ಇತ್ತೀಚೆಗಷ್ಟೇ ಸಿನಿಮಾ ಪ್ರಚಾರವನ್ನು ಆರಂಭಿಸಿದ್ದು, ಅದರ ಭಾಗವಾಗಿ ಮಹಾರಾಷ್ಟ್ರದ ಕಾಲೇಜು ಒಂದಕ್ಕೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬಳು ಜೊತೆಯಲ್ಲಿ ಡಾನ್ಸ್​ ಮಾಡುವ ಬಯಕೆಯನ್ನು ರಿತೇಶ್​ ಬಳಿ ಹೇಳಿಕೊಂಡರು. ರಿತೇಶ್​ ಓಕೆ ಎಂದ ಬಳಿಕ ವೇದಿಕೆಯಲ್ಲೇ ಒಟ್ಟಾಗಿ ಡಾನ್ಸ್​ ಮಾಡುವ ಮೂಲಕ ಅಭಿಮಾನಿಯ ಆಸೆ ತೀರಿಸಿದರು.

ಡಾನ್ಸ್​ ಬಳಿಕ ತುಂಬಾ ಭಾವುಕಳಾದ ಅಭಿಮಾನಿ ರಿತೇಶ್​ ಕಾಲಿಗೆ ಬಿದ್ದಳು. ಆಕೆಯನ್ನು ಮೇಲೆತ್ತಿದ್ದ ರಿತೇಶ್​, ತಾವೂ ಸಹ ಅಭಿಮಾನಿಯ ಕಾಲಿಗೆ ಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ರಿತೇಶ್​ ಅವರನ್ನು ಮನಸಾರೆ ಹೊಗಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button