Breaking Newsಜಿಲ್ಲಾ ಸುದ್ದಿರಾಮನಗರ

ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿ ಆಗ್ತಾರೆ: ಸಚಿವ ನಾರಾಯಣಗೌಡ ಭವಿಷ್ಯ

ರಾಮನಗರ: ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗಲಿದ್ದು, ಅವರ ಮೇಲಿರುವ ಪ್ರಕರಣ ಆದಷ್ಟು ಬೇಗ ಬಗೆಹರಿಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಸಚಿವ ಕೆ.ಸಿ. ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಗ್ಗೆ ನಮಗೆ ಗೌರವ ಇದೆ. ನಾವೆಲ್ಲರೂ ಜೊತೆಗಿದ್ದವರು ಎಂದು ಹೇಳಿದರು.
ಬಾಂಬೆಯಲ್ಲಿ ಸತೀಶ್ ಅವರಿಗೆ ವ್ಯವಹಾರವಿದೆ. ಅವರ ಮಕ್ಕಳು ಮೊಮ್ಮಕ್ಕಳು ಓದುತ್ತಿದ್ದಾರೆ. ಅದ್ದರಿಂದ ಅವರು ಅಗಾಗ ಬಾಂಬೆಗೆ ಹೋಗುತ್ತಾರೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲವೆಂದ ಅವರು, ದೆಹಲಿಗೆ ಹೋಗಿದ್ದಾರೆ. ಅವರ ಮಂತ್ರಿಯಾಗುವುದರ ಬಗ್ಗೆ ಕ್ಲಿಯರ್ ಆಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಮಗು ಹುಟ್ಟುವುದಕ್ಕಿಂತ ಮೊದಲೆ ಕುಲವಿ ಹೊಲೆಯುವಂತೆ ಅವರು ಕನಸು ಕಾಣುತ್ತಿದ್ದು, ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು 2 ವರ್ಷ ಬಾಕಿಯಿದೆ. ಹೆಚ್ಚಿನ ಶಾಸಕರು ಆಯ್ಕೆಯಾದ ಪಕ್ಷ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಈಗಲೇ ಅವರು ಸಿಎಂ ಕುರ್ಚಿಯ ಕನಸು ಕಾಣ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆಯಿಲ್ಲ. 2 ವರ್ಷಗಳ ಕಾಲ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೆಲ್ಲವೂ ವಿರೋಧಿಗಳು ಹಬ್ಬಿಸುತ್ತಿರುವ ಕಟ್ಟು ಕತೆ ಎಂದು ಆರೋಪಿಸಿದರು.

ಯಡಿಯೂರಪ್ಪ ಬದಲಾವಣೆ ಬಗ್ಗೆ ಪಕ್ಷದಲ್ಲಿ, ದಿಲ್ಲಿ-ಬೆಂಗಳೂರಿನಲ್ಲಿ ಏನು ನಡೆಯುತ್ತಿಲ್ಲ. ಅದೇಲ್ಲ ಅಂತೆ ಕಂತೆಯಷ್ಟೆ. ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. 150 ಸೀಟುಗಳನ್ನು ನಾವು ಗೆಲ್ಲುತ್ತೇವೆ ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವೆಂದು ತಿಳಿಸಿದರು.

ಮುಖ್ಯಮಂತ್ರಿ ಬಗ್ಗೆ ಮಾತನಾಡಿದರೇ ಸುಟ್ಟು ಹೋಗುತ್ತಾರೆಂದು ಸಚಿವ ಯೋಗೇಶ್ವರ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ಸರಿಯಾಗಿಯೇ ಹೇಳಿದ್ದಾರೆ. ನಾವೆಲ್ಲ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಮುಂದಿನ ಬಾರಿಯೂ ಬಿಜೆಪಿಯದ್ದೇ ಅಧಿಕಾರವೆಂದರು.

Spread the love

Related Articles

Leave a Reply

Your email address will not be published. Required fields are marked *

Back to top button