Breaking NewsLatestರಾಷ್ಟ್ರೀಯಸುದ್ದಿ
ಕಾಶ್ಮೀರ್ ಫೈಲ್ಸ್ ಅವಹೇಳನ ಖಂಡಿಸಿದ ಇಸ್ರೇಲ್ ರಾಯಭಾರಿಗೆ ಅಣ್ಣಾಮಲೈ ಅಭಿನಂದನೆ

ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಅಶ್ಲೀಲ ಚಿತ್ರ ಎಂದು ಅವಹೇಳನ ಮಾಡಿದ್ದ ಇಸ್ರೇಲಿ ಚಿತ್ರ ನಿರ್ಮಾಪಕ, ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥ ನಡಾವ್ ಲ್ಯಾಪಿಡ್ಗೆ ಬಹಿರಂಗ ಪತ್ರ ಬರೆದು ಕಠಿಣ ಪದಗಳಲ್ಲಿ ಖಂಡಿಸಿದ ಇಸ್ರೇಲ್ ರಾಯಭಾರಿ ನಯೋರ್ ಗಿಲಾನ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಅಭಿನಂದಿಸಿದ್ದಾರೆ.
ನಿಮ್ಮ ಕಠಿಣ ಪದಗಳಿಗೆ ಅಭಿನಂದನೆಗಳು ರಾಯಭಾರಿಯವರೇ, ಉಭಯ ದೇಶಗಳ ಬಾಂಧವ್ಯ ಗಟ್ಟಿಯಾಗಿದೆ ಮತ್ತು ಪ್ರಬಲವಾಗಿದೆ. ಅದನ್ನು ಇಂಥ ಘಟನೆಗಳು ಸಡಿಲ ಮಾಡದು. ಇತಿಹಾಸದಿಂದ ಪಾಠ ಕಲಿಯದವರು, ಅದನ್ನು ಪುನರಾವರ್ತಿಸಲು ಯತ್ನಿಸಿ ಅವನತಿ ಹೊಂದುತ್ತಾರೆ. ಹೀಗಾಗಿ ಶಿಂಡ್ಲೆರ್ಸ್ ಲಿಸ್ಟ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳು ನಮ್ಮನ್ನು ಒಗ್ಗೂಡಿಸುತ್ತವೆ. ( ಶಿಂಡ್ಲೆರ್ಸ್ ಲಿಸ್ಟ್ ಸಿನಿಮಾ ಯೆಹೂದ್ಯರ ನರಮೇಧದ ಕಥಾ ಹಂದರವನ್ನು ಒಳಗೊಂಡಿದೆ.)