Breaking NewsLatestವಿದೇಶಸುದ್ದಿ
ಫ್ರಾನ್ಸ್ನ ಲಿವೋನ್ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ದುರಂತ, 5 ಮಕ್ಕಳು ಸೇರಿದಂತೆ 10 ಮಂದಿ ಸಾವು

ಪ್ಯಾರಿಸ್: ಫ್ರೆಂಚ್ ನಗರದ ಲಿವೋನ್ ಬಳಿಯ ವಾಲ್ಕ್ಸ್-ಎನ್-ವೆಲಿನ್ನಲ್ಲಿರುವ ವಸತಿ ಕಟ್ಟಡದಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ದುರಂತ ಸಂಭವಿಸಿದ್ದು ಐದು ಮಕ್ಕಳು ಸೇರಿದಂತೆ ಹತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.
ಇಲ್ಲಿಯವರೆಗೆ ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಲಿವೋನ್ ಮತ್ತು ರೋನ್ ಪ್ರದೇಶದ ಸ್ಥಳೀಯ ಪ್ರಾಧಿಕಾರ ತಿಳಿಸಿದೆ. ಸುಮಾರು 170 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.ಶುಕ್ರವಾರ ಮುಂಜಾನೆ ವಾಲ್ಕ್ಸ್-ಎನ್-ವೆಲಿನ್ನಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ದುರಂತ ಸಂಭವಿಸಿದ ಜಾಗದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ