Breaking NewsLatestಕ್ರೈಂಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಸತತ 8 ಗಂಟೆಗಳ ಕಾಲ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ನನ್ನು ಡಿವೈಎಸ್ಪಿ ಗಳ ತಂಡವು ವಿಚಾರಣೆ ನಡೆಸಿದೆ!

ಬೆಂಗಳೂರು: ಖುದ್ದು ಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟರ ಕೂಪವಾಗಿದೆ ಎಂದು ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತ ಎಸಿಬಿ ಅಧಿಕಾರಿಗಳ ತಂಡವು ಬೆಂಗಳೂರು ಜಿಲ್ಲಾಧಿಕಾರಿ ವಿರುದ್ಧದ ತನಿಖೆಯನ್ನು ಚುರುಕುಗೊಳಿಸಿದೆ.

ಬೆಂಗಳೂರಿನ ಎಸಿಬಿ ಕಚೇರಿಯಲ್ಲಿಇಬ್ಬರು ಡಿವೈಎಸ್ಪಿ ಗಳ ತಂಡವು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ವಿಚಾರಣೆ ನಡೆಸುತ್ತಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಇನ್ನೂ ಮುಂದುವರಿದಿದೆ. ಇಡೀ ಪ್ರಕರಣ ಸಂಬಂಧ ವಿಸ್ತೃತ ತನಿಖೆ ನಡೆಸಿ ಜುಲೈ 4 ರಂದು ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ಡಿವೈಎಸ್ ಪಿ ಬಸವರಾಜ್ ಮಗದುಮ್ ಅವರು ಭ್ರಷ್ಟಾಚಾರ ಪ್ರಕರಣದ ಸಂಬಂಧ ಡಿಸಿ ಮಂಜುನಾಥ್ ರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಡಿ ಸಿ ಮಂಜುನಾಥ್ ವಿಚಾರಣೆ ನಡೆದಿದೆ. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಅವರು ದಾಳಿಗೆ ಸಂಬಂಧಿಸಿದಂತೆ ಎಸ್ ಪಿ ಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಎಸಿಬಿ ಎಸ್ ಪಿ ಗಳಾದ ಉಮಾ ಪ್ರಶಾಂತ್, ಹರೀಶ್ ಪಾಂಡೆ, ಯತೀಶ್ ಚಂದ್ರ ಎಡಿಜಿಪಿಗೆ ಮಾಹಿತಿ ಒದಗಿಸುತ್ತಿದ್ದಾರೆ. 

Spread the love

Related Articles

Leave a Reply

Your email address will not be published.

Back to top button