Breaking Newsಹುಬ್ಬಳ್ಳಿ - ಧಾರವಾಡ

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು

ಧಾರವಾಡ : ಮಾವಿನ ಫಸಲು‌ ಮಾರಿದ ಹಣ ತರಲು‌ ನಗರಕ್ಕೆ ಬಂದು ಮರಳಿ ಗ್ರಾಮಕ್ಕೆ ತೆರಳುವ ವೇಳೆ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡ ಹೊರವಲಯದ ಹೊಯ್ಸಳ ನಗರ ಬಳಿ ನಡೆದಿದೆ.

ಮೃತ ಇಬ್ಬರು ಬೈಕ್​​​ ಸವಾರರು ಬೈಕ್​​​​ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದರು, ಪರಶುರಾಮ ಮುರುಕಟ್ಟಿ (31) ಗುರುಸಿದ್ದ ದಾಸನಕೊಪ್ಪ ಮೃತ ಬೈಕ್​​​​ ಸವಾರರಾಗಿದ್ದಾರೆ.

ಇನ್ನೂ ಅಪರಿಚಿತ ವಾಹನ ಡಿಕ್ಕಿ ರಬ್ಬಸಕ್ಕೆ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗುದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರಿಗೂ ಅಫಘಾತದ ಭೀಕರತೆ ಕಂಡು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಮೃತ ದೇಹಗಳನ್ನು ರಸ್ತೆಯಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.

ಘಟನೆ ಕುರಿತು ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಾಹನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button