Breaking NewsLatestರಾಷ್ಟ್ರೀಯಸುದ್ದಿ

ಬಿಜೆಪಿಯಿಂದ ಮಾತ್ರವೇ ಭಾರತ ವಿಶ್ವಗುರುವಾಗಲು ಸಾಧ್ಯ: ಜೆ.ಪಿ.ನಡ್ಡಾ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಾತ್ರವೇ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಿದ್ದ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಡಾರ ಮತ್ತು ಪೋಲಿಯೊದಂತಹ ರೋಗಗಳಿಗೆ ಲಿಸಿಕೆಗಳನ್ನು ಅಭಿವೃದ್ಧಿ ಪಡಿಸಲು ವರ್ಷಗಳೇ ಬೇಕಾದವು. ಆದರೆ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಒಂಬತ್ತು ತಿಂಗಳೊಳಗೆ ಲಸಿಕೆಯನ್ನು ಸಿದ್ಧಪಡಿಸಲಾಯಿತು ಎಂದರು.

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ದೇಶದಲ್ಲಿ ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ದೇಶದ ಜನರಿಗೆ 190 ಕೋಟಿಗೂ ಹೆಚ್ಚು ಲಸಿಕಾ ಡೋಸ್‍ಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು. 

ಪಾಕಿಸ್ತಾನದ ವಿದ್ಯಾರ್ಥಿಗಳು ತಮ್ಮ ವಾಹನಗಳ ಮೇಲೆ ಭಾರತದ ಧ್ವಜಗಳನ್ನು ಹಾರಿಸುವ ಮೂಲಕ ಉಕ್ರೇನ್‍ನಿಂದ ಹೊರಬರುವಲ್ಲಿ ಯಶಸ್ವಿಯಾದರು. ಇದು ಭಾರತವನ್ನು ಬದಲಾಯಿಸುವ ಚಿತ್ರವಾಗಿದ್ದು, ಈ ರೀತಿಯ ಸಾಧನೆ ಪ್ರಧಾನಿ ಮೋದಿಯವರ ಪ್ರಬಲ ನಾಯಕತ್ವದಿಂದ ಮಾತ್ರ ಸಾಧ್ಯವಾಯಿತು ಎಂದರು.

Spread the love

Related Articles

Leave a Reply

Your email address will not be published.

Back to top button