Breaking Newsಜಿಲ್ಲಾ ಸುದ್ದಿಬೆಳಗಾವಿ
ರಮೇಶ ಜಾರಕಿಹೊಳಿ ಜೊತೆ ಹೋಗಿಲ್ಲ; ಮಹೇಶ್ ಕುಮಟಳ್ಳಿ ಸ್ಪಷ್ಟನೆ

ಬೆಳಗಾವಿ: ನಾನು ನನ್ನ ಕ್ಷೇತ್ರದಲ್ಲಿಯೇ ಇದ್ದೇನೆ. ಜಾರಕಿಹೋಳಿ ಅವರ ಜೊತೆಗೆ ತೆರಳಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಅವರು, ವದಂತಿಗಳನ್ನು ಹಬ್ಬಿಸದಂತೆ ಮಾಧ್ಯಮಗಳಿಗೆ ಕೈ ಮುಗಿದು ವಿನಂತಿಸಿದರು.
ನನ್ನ ಕ್ಷೇತ್ರದಲ್ಲಿ ನಾನು ಇರುವಂತೆ ಉಳಿದವರೂ ಇರಬಹುದು ಎಂದ ಅವರು, ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದರು.
ಬಿಎಸ್ವೈ 2023ರವರೆಗೂ ಸಿಎಂ ಆಗಿರುತ್ತಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.