ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಂಬ್ : ಮುಂಬೈನಲ್ಲಿ ಮತ್ತೆ ಬಿಡು ಬಿಟ್ಟಿರುವ ಸಾಹುಕಾರ

– ಮಲ್ಲಿಕ್
ಬೆಳಗಾವಿ : ಗೋಕಾಕ್ ಬಿಜೆಪಿ ಶಾಸಕ, ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಏಕಾಏಕಿ ಹೊಸ ಬಾಂಬ್ ಒಂದನ್ನ ಬಿಟ್ಟಿದ್ದಾರೆ, ಅದೇನು ಅಂದ್ರೆ ರಾಜೀನಾಮೆ ಬಾಂಬ್ ಇದೆ ತಿಂಗಳು ನಾನು ರಾಜೀನಾಮೆ ಕೊಡ್ತೀನಿ ಅನ್ನುವ ಹೊಸ ವರಸೆಯನ್ನ ಆಪ್ತರಿಂದಲೇ ಹೇಳಿಸಲು ಶುರುಮಾಡಿದ್ದಾರೆ, ಇದಕ್ಕೆ ಪುಷ್ಠಿ ನೀಡುವ ಹಾಗೆ ಸದ್ಯ ಗೋಕಾಕ್ ಶಾಸಕ ಮುಂಬೈಗೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ರಮೇಶ ಜಾರಕಿಹೊಳಿ ಕಡೆಗಣನೆ ಹಿನ್ನೆಲೆ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಅಂತ ಆಪ್ತರು ಹೇಳುತ್ತಿದ್ದಾರೆ ಆದ್ರೆ ಅಸಲಿಗೆ ಇದು ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸುವ ತಂತ್ರ ಆದ್ರೂ ತಪ್ಪಾಗಲಾರದು.
ಈಗಾಗಲೇ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆ. ರಮೇಶ ಜಾರಕಿಹೊಳಿ ಮುಂಬೈಗೆ ತೆರಳಿದ ಬೆನ್ನಲ್ಲೇ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಮುಂಬೈಗೆ ಹಾರಿದ್ದು ಜಾರಕಿಹೊಳಿ ಸಹೋದರರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಜೂನ್ 23 ಕ್ಕೆ ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ತೆರಳಿ ರಮೇಶ ಜಾರಕಿಹೊಳಿ ತಮ್ಮ ಗುಂಪಿನ ಸಚಿವರಾದ ಸಿ.ಪಿ.ಯೋಗಿಶ್ವರ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಜೊತೆ ಚರ್ಚೆ ಬಳಿಕ ರಾಜೀನಾಮೆ ನೀಡುತ್ತಾರೆ ಎಂದು ಆಪ್ತ ವಲಯ ಮಾಹಿತಿ ನೀಡುತ್ತಿದೆ.
ಆದರೆ, ಅಸಲಿಗೆ ಮಿತ್ರ ಮಂಡಳಿಯ ಇನ್ನು ಹಲವು ಶಾಸಕರು ಹಾಗೂ ಬಿಜೆಪಿಯ ಮೂರನೇ ಬಣದ ಪ್ರಮುಖ ಶಾಸಕರು ಮುಂಬೈಗೆ ತೆರಳುವ ಸಾಧ್ಯತೆ ಇದ್ದು ಇದೆಲ್ಲವೂ ಮುಖ್ಯಮಂತ್ರಿ ಯುಡಿಯೂರಪ್ಪ ಅವರ ಕುರ್ಚಿ ಖಾಲಿ ಮಾಡಿಸಲು ನಡೆದಿರುವ ಕೊನೆಯ ಅಸ್ತ್ರ ಎನ್ನಲಾಗುತ್ತಿದೆ.