Breaking NewsLatestರಾಷ್ಟ್ರೀಯ

ದಕ್ಷಿಣ ಕೊರಿಯಾದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆಗೆ ಬ್ರಿಟನ್‌ ಸಿದ್ಧತೆ

ಲಂಡನ್‌: ದಕ್ಷಿಣ ಕೊರಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಜ್ಜಾಗಿರುವ ಬ್ರಿಟನ್‌, ಈ ಸಂಬಂಧ ತನ್ನ ವಹಿವಾಟು ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ.

ಯೂರೋಪಿಯನ್‌ ಒಕ್ಕೂಟದಿಂದ ಹೊರಬಂದ ನಂತರ ವಿಶ್ವದೆಲ್ಲೆಡೆ ವಹಿವಾಟು ಒಪ್ಪಂದ ಬ್ರಿಟನ್‌ನ ಗುರಿಯಾಗಿದ್ದು, ಏಷ್ಯಾ ರಾಷ್ಟ್ರಗಳ ಜೊತೆಗೆ ವಹಿವಾಟು ವೃದ್ಧಿಗೆ ಎದುರು ನೋಡುತ್ತಿದೆ.

ಜಿ20 ಸದಸ್ಯ ರಾಷ್ಟ್ರ ದಕ್ಷಿಣ ಕೊರಿಯಾದೊಂದಿಗೆ ಬ್ರಿಟನ್ ಇನ್ನಷ್ಟೇ ಔಪಚಾರಿಕ ಮಾತುಕತೆ ಆರಂಭಿಸಬೇಕಿದೆ. ಉಭಯ ರಾಷ್ಟ್ರಗಳ ವ್ಯಾಪಾರ ಬಾಂಧವ್ಯದಿಂದ 14.3 ಶತಕೋಟಿ ಪೌಂಡ್‌ ವಹಿವಾಟು ಎದುರು ನೋಡುತ್ತಿರುವುದಾಗಿ ಬ್ರಿಟನ್‌ ಹೇಳಿದೆ.

‘ಜಗತ್ತಿನಲ್ಲಿ ಅತ್ಯಂತ ವೇಗಯುತವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ಭಾಗವಾಗಿರುವ ರಾಷ್ಟ್ರದೊಂದಿಗೆ ವಹಿವಾಟು ಮಾತುಕತೆ ಪ್ರಾರಂಭಿಸಲು ಸಂತಸವಾಗುತ್ತಿದೆ’ ಎಂದು ಬ್ರಿಟನ್‌ ವಹಿವಾಟು ಸಚಿವ ಗ್ರೆಗ್‌ ಹ್ಯಾಂಡ್ಸ್‌ ಹೇಳಿದ್ದಾರೆ.

‘ಇಂಡೋ ಪೆಸಿಫಿಕ್‌ ಭಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಬ್ರಿಟನ್‌ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ದಕ್ಷಿಣ ಕೊರಿಯಾ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾ ವಿಶ್ವದಲ್ಲಿ ಸೆಮಿಕಂಡಕ್ಟರ್‌ ಉತ್ಪಾದಕ 3ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಈ ವಲಯ ಮತ್ತು ಇತರರ ಬೇಡಿಕೆ ಇರುವ ಉತ್ಪನ್ನ ಪೂರೈಕೆ ಸರಪಳಿ ಬಲಪಡಿಸಲು ಬ್ರಿಟನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button