Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿ
ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಯ್ತು: ಸಿಟಿ ರವಿ

ಅಝಾನ್ ಕುರಿತಾಗಿ ದಿನದಿಂದ ದಿನಕ್ಕೆ ವಾದ ವಿವಾದಗಳು ಜೋರಾಗಿಯೇ ಕೇಳಿ ಬರ್ತಿದೆ. ಇದೀಗ ಅಝಾನ್ ನಿಂದಾಗಿ ರಾಜಕೀಯ ನಾಯಕರುಗಳ ಮಧ್ಯೆ ಕಿತ್ತಾಡ ಶುರುವಾಗಿದೆ. ಕಾಂಗ್ರೆಸ್ ಆಝಾನ್ ಪರವಾಗಿದೆ ಎಂದು ಹೇಳಿಕ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳು ನ್ಯಾಯಾಲಯದ ತೀರ್ಪುಗಿಂತ ಮತಬ್ಯಾಂಕ್ ರಾಜಕಾರಣವೇ ಮುಖ್ಯ ಎನ್ನುವಂತಿದೆ. ಇದು ಮತೀಯವಾದದ ಓಲೈಕೆ ಅಲ್ಲದೆ ಮತ್ತೇನು..? ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಯ್ತು. ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ. ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ಸಂವಿಧಾನ ಮತೀಯವಾದದ ತಾರತಮ್ಯ ಮಾಡುವುದನ್ನು ಸಮರ್ಥಿಸಿಲ್ಲ ವಿರೋಧಿಸಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಮಹಾನುಭಾವರು ನ್ಯಾಯಾಲಯ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.