Breaking NewsLatest

ಡೆಲ್ಟಾ ಆತಂಕ: ತರಾತುರಿಯ ಅನ್​ಲಾಕ್​​​​​ ಬೇಡವೆಂದ ತಾಂತ್ರಿಕ ಸಲಹಾ ಸಮಿತಿ

ಬೆಂಗಳೂರು : ಕೋವಿಡ್ 2ನೇ ಅಲೆ ನಿಯಂತ್ರಣದ ಬೆನ್ನಲ್ಲೇ ಡೆಲ್ಟಾ-ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಲ್ಲದೆ, ಲಾಕ್ ಡೌನ್ ಸಡಿಲಿಕೆಯಿಂದ ರಾಜ್ಯದಲ್ಲಿ ಮತ್ತೆ ನಿಧಾನವಾಗಿ ಪರಿಸ್ಥಿತಿ ಗಂಭೀರವಾಗುತ್ತಿರುವ ಲಕ್ಷಣವಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದೆ ಅಲ್ಲದೆ ತರಾತುರಿಯಲ್ಲಿ ಅನ್ಲಾಕ್ ಮಾಡುವುದು ಬೇಡ ಎಂದು ಸರ್ಕಾರಕ್ಕೆ ಎಚ್ಚರಿಸಿದೆ.

ಈಗಾಗಲೇ ಡೆಲ್ಟಾ-ಪ್ಲಸ್ ರಾಜ್ಯಕ್ಕೆ ಪ್ರವೇಶಿಸಿದೆ. ತಕ್ಷಣವೇ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಜನಸಂದಣಿಯನ್ನು ತಡೆಯಬೇಕು, ವ್ಯಾಪಕ ಪರೀಕ್ಷೆ ನಡೆಸಬೇಕು ಮತ್ತು ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆಯ ಮೇಲೆ ಲಸಿಕೆ ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button