Breaking NewsLatestರಾಷ್ಟ್ರೀಯಸುದ್ದಿ

ಹಣಕಾಸು ಸಚಿವೆ ನಿರ್ಮಲಾ ಜಗತ್ತಿನ ಪ್ರಭಾವಿ ಮಹಿಳೆ

ಹೊಸದಿಲ್ಲಿ: ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆಯರ ಸ್ಥಾನದಲ್ಲಿ ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಹಿತ 6 ಮಂದಿ ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ.

“ಫೋರ್ಬ್ಸ್ ನಿಯತಕಾಲಿಕ ಈ ಪಟ್ಟಿ ಯನ್ನು ಸಿದ್ಧಪಡಿಸಿದೆ.

ನಿಯತಕಾಲಿಕ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಬೆಂಗಳೂರಿನಲ್ಲಿ ಇರುವ ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ನಾಯ್ಕ ಸಂಸ್ಥೆಯ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಸ್ಥಾನ ಪಡೆದಿದ್ದಾರೆ. ಕಿರಣ್‌ ಮಜುಂದಾರ್‌ ಶಾ 72ನೇ ಸ್ಥಾನ, ಫ‌ಲ್ಗುಣಿ ನಾಯರ್‌ 89ನೇ ಸ್ಥಾನ ಪಡೆದಿದ್ದಾರೆ.

ಹಣಕಾಸು ಸಚಿವರು ಪಟ್ಟಿಯಲ್ಲಿ 36ನೇ ರ್‍ಯಾಂಕ್‌ ಪಡೆದಿ ದ್ದಾರೆ. ಸತತ ನಾಲ್ಕನೇ ಬಾರಿಗೆ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಸಚಿವರು 37ನೇ ಸ್ಥಾನ, 2000ನೇ ಇಸ್ವಿಯಲ್ಲಿ 41, 2019ರಲ್ಲಿ 34ನೇ ಸ್ಥಾನದಲ್ಲಿ ಇದ್ದರು.

ಎಚ್‌ಸಿಎಲ್‌ ಟೆಕ್ನಾಲಜಿಯ ಅಧ್ಯಕ್ಷೆ ರೋಶನಿ ನಾಡಾರ್‌ ಮಲ್ಹೋತ್ರಾ 53, ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ 54, ಭಾರ ತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷೆ ಸೋಮ ಮಂಡಲ್‌ 67ನೇ ಸ್ಥಾನದಲ್ಲಿ ಇದ್ದಾರೆ. ಪಟ್ಟಿಯಲ್ಲಿ ಐರೋಪ್ಯ ಒಕ್ಕೂಟದ ಸೆಂಟ್ರಲ್‌ ಬ್ಯಾಂಕ್‌ನ ಅಧ್ಯಕ್ಷೆ ಕ್ರಿಸ್ಟೀನ್‌ ಲಗಾರ್ಡೆ ದ್ವಿತೀಯ ಸ್ಥಾನ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button