Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜ್ಯಸುದ್ದಿ
ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆಯೂ ಅಲ್ಲ: ಹೆಚ್ ಡಿ ಕುಮಾರಸ್ವಾಮಿ

ಕಲಬುರ್ಗಿ: ಕರ್ನಾಟಕವು ಗುಜರಾತ್ ನಿಂದ ತುಂಬಾ ದೂರವೇ ಇದೆ. ಇಲ್ಲಿ ಗುಜರಾತ್ ಮಾದರಿಯಲ್ಲಿಯೇ ಬಿಜೆಪಿ ಬರಲಿದೆ ಎಂಬುದು ಸುಳ್ಳು. ಅಲ್ಲದೇ ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ವರ್ಕ್ ಆಗುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಲ್ಲ. ಗುಜರಾತ್ ರಾಜಕಾರಣವೇ ಬೇರೆ, ಕರ್ನಾಟಕ ರಾಜಕಾರಣವೇ ಬೇರೆಯಾಗಿದೆ. ಇದಕ್ಕೆ ಕನ್ನಡಿಗರು ಯಾರೂ ಹತಾಶರಾಗಬಾರದು ಎಂಬುದಾಗಿ ಹೇಳಿದರು.
ಕಾಂಗ್ರೆಸ್ ಇದೇ ರೀತಿಯ ಫಲಿತಾಂಶ ಬರುತ್ತದೆ ಅಂತ ನಿರೀಕ್ಷಿಸಿತ್ತು. ಗುಜರಾತ್ ನಲ್ಲಿ ಕಾಂಗ್ರೆಸ್ ಸೇವಿ ವಿಪಕ್ಷಗಳು ವೀಕ್ ಆಗಿದ್ದಾವೆ. ಅದಕ್ಕೆ ರಿಸಲ್ಟ್ ಹೀಗೆ ಬಂದಿದೆ. ಆದರೇ ಗುಜರಾತ್ ನಲ್ಲಿನ ಫಲಿತಾಂಶ ಬಿಜೆಪಿಯ ಸಾಧನೆಯೂ ಅಲ್ಲ ಎಂದರು.
ಇನ್ನೂ ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯುತ್ತೇ ಎಂಬುದೆಲ್ಲಾ ಸುಳ್ಳು. ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ವರ್ಕ್ ಆಗುವುದಿಲ್ಲ. ರಾಜ್ಯದ ಜನರಿಗೆ ಮೋದಿ ಮ್ಯಾಜಿಕ್ ಬಗ್ಗೆ ಈಗಾಗಲೇ ಗೊತ್ತಾಗಿದೆ ಎಂದು ಹೇಳಿದರು.