Breaking NewsLatestಉಡುಪಿಜಿಲ್ಲಾ ಸುದ್ದಿ

ಸಚಿವೆ ಆಗಬೇಕೆಂಬ ಆಕಾಂಕ್ಷೆ ಖಂಡಿತ ನನಗಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡುತ್ತಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಇಂದು ಉಡುಪಿಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಮಾಹಿತಿ ಕೊಡಬೇಕು ಎಂದು ಗೋಡೆ ಮೇಲೆ ದೀಪ ಇಟ್ಟ ರೀತಿ ಮಾತನಾಡಿದ್ದಾರೆ. 

ಸಚಿವೆ ಆಗಬೇಕೆಂಬ ಆಕಾಂಕ್ಷೆ ಖಂಡಿತ ನನಗಿಲ್ಲ. ದಕ್ಷಿಣ ಭಾರತದಲ್ಲಿ ಬಹಳ ಹಿರಿಯ ನಾಯಕರಿದ್ದಾರೆ. ಕರ್ನಾಟಕದಲ್ಲಿ ನನಗಿಂತ ತುಂಬಾ ಹಿರಿಯರಿದ್ದಾರೆ ಅಂತವರಿಗೆ ಅವಕಾಶವನ್ನ ನೀಡಲಿ ನಾನು ಯಾವುದೇ ರೀತಿಯಲ್ಲಿಯೂ ಆಕಾಂಕ್ಷೆ ಅಲ್ಲಾ ಎಂದು ಶೋಭಾ ಕರಂದ್ಲಾಜೆ ಹೇಳಿರುವ ಮಾತಿನ ನಡುವೆ ಸಾಕಷ್ಟು ಗೊಂದಲಗಳು ಕೂಡ ಎದ್ದು ಕಾಣುತ್ತಿತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರುcabinet expansion ಎಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣದ ಬಗ್ಗೆ ತುಟಿಬಿಚ್ಚಿದ್ದಾರೆ, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂದಲೇ ಕೊಲೆಯಾಗಿರುವ ಘಟನೆ ಬಗ್ಗೆ ಇದೀಗ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಅಪರಾಧದಲ್ಲಿ ಪಕ್ಷ, ರಾಜ, ಧರ್ಮ ರಾಜಕಾರಣ ಇಲ್ಲ ಹಾಗೂ ಘಟನೆ ನಡೆದ ಮೊದಲ ದಿನವೇ ಗೃಹ ಸಚಿವರು ಹಾಗೂ ಎಸ್ಪಿ ಅವರಿಗೆ ಫೋನ್ ಮಾಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎದ್ದಿರುವ ತುಳು ಭಾಷೆಯ ಮಾನ್ಯತೆ ಬಗ್ಗೆ ಸಂಸದೆ ಪ್ರತಿಕ್ರಿಯೆ ನೀಡಿದ್ದು, ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು ಎಂದು ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ.

ಹಿಂದೆ ನಾನು ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ
ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ ಹಾಗೂ ಯಾವುದೇ ತುಳುರಾಜ್ಯ ಇಲ್ಲ. ನಾವು ಕರ್ನಾಟಕದವರು
ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಇಲ್ಲ.
ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು. ತುಳು ಭಾಷೆಗಾಗಿ ನಮ್ಮ ಹೋರಾಟ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button