Breaking NewsLatestರಾಷ್ಟ್ರೀಯಸುದ್ದಿ
ಕಳೆದುಹೋದ ನನ್ನ ಕೈಗಡಿಯಾರವನ್ನು ಭಾರತವು ಮರಳಿಸಿತು!

ವಿದೇಶಿಗರೊಬ್ಬರು ಇತ್ತೀಚೆಗೆ ಕೆಲಸದ ನಿಮಿತ್ತ ಭಾರತಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಕೈಗಡಿಯಾರ ಕಳೆದು ಹೋಯಿತು. ವಾಪಸ್ ತಮ್ಮ ದೇಶಕ್ಕೆ ಮರಳಿದಾಗ ಅವರಿಗೆ ಕೈಗಡಿಯಾರದ ನೆನಪಾಯಿತು. ತಕ್ಷಣವೇ ಇಮೇಲ್ ರವಾನಿಸಿದರು. ತ್ವರಿತ ರೀತಿಯಲ್ಲಿ ಇವರ ಕೈಗಡಿಯಾರ ಇವರನ್ನು ಮರಳಿ ಸೇರಿತು. ಇದರಿಂದ ಸಂತೋಷಗೊಂಡ ಈ ವ್ಯಕ್ತಿ ಲಿಂಕ್ಡಿನ್ ನಲ್ಲಿ ತಮ್ಮ ಕೈಗಡಿಯಾರದ ಕಥೆಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಐಟಿಸಿ ಕಂಪೆನಿಯ ವೃತ್ತಿಪರತೆಯನ್ನು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ನಾನು ಆಯಂಡರ್ ಆಯಂಡರ್ಸನ್. ಇತ್ತೀಚೆಗೆ ಕಾರ್ಯನಿಮಿತ್ತ ನನಗೆ ಭಾರತಕ್ಕೆ ಭೇಟಿನೀಡುವ ಅವಕಾಶ ದೊರೆಯಿತು. ನಾನು ಇಷ್ಟೊಂದು ದೇಶಗಳನ್ನು ಸುತ್ತಿದರೂ ಇಂಥ ಆಪ್ತ, ಅದ್ಭುತ ಅನುಭವ ಈತನಕ ನನಗಾಗಿರಲಿಲ್ಲ. ಕಳೆದುಹೋದ ಒಂದು ಕೈಗಡಿಯಾರ ಮರಳಿ ಸಿಕ್ಕಾಗ ಭಾರತದ ಸಂಸ್ಕೃತಿ, ಸಂಬಂಧಗಳ ಬಂಧ ಎಷ್ಟೊಂದು ಶ್ರೀಮಂತಿಕೆಯಿಂದ ಕೂಡಿದೆ ಎಂಬ ಅರಿವಾಯಿತು.