Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಇಸ್ರೊದ ‘ಆರ್‌ಎಚ್‌200’ ರಾಕೆಟ್‌ ಯಶಸ್ವಿ ಉಡಾವಣೆ

ಬೆಂಗಳೂರು: ತಿರುವನಂತಪುರ ಬಳಿಯ ಉಡ್ಡಯನ ಕೇಂದ್ರದಿಂದ ಇಸ್ರೊದ ‘ಆರ್‌ಎಚ್‌200’ ರಾಕೆಟ್‌ ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

‘ಇದು ಈ ಸರಣಿಯಲ್ಲಿ ಸಂಸ್ಥೆಯು ನೆರವೇರಿಸಿರುವ 200ನೇ ಉಡ್ಡಯನವಾಗಿದೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು’ ಎಂದು ಸಂಸ್ಥೆ ಹೇಳಿದೆ.

‘ಆರ್‌ಎಚ್‌200’ ಎಂಬುದು ಹವಾಮಾನವಿಜ್ಞಾನ, ಖಗೋಳವಿಜ್ಞಾನದಲ್ಲಿ ಸಂಶೋಧನೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಬಳಸುವ ರಾಕೆಟ್‌ ಆಗಿದೆ.

Spread the love

Related Articles

Leave a Reply

Your email address will not be published.

Back to top button