ವೈಜ್ಞಾನಿಕ ತಳಹದಿಯಲ್ಲಿ ಕನ್ನಡ ವರ್ಣಮಾಲೆ

ಯಾವುದೇ ಭಾಷೆಯು ವೈಜ್ಞಾನಿಕವಾಗಿದ್ದರೆ ಅದನ್ನು ಬಳಸುವುದು ಸುಲಭ ಹಾಗೂ ಅದನ್ನು ಕಲಿಯುವುದು ಕೂಡ ಸುಲಭ. ಪ್ರಪಂಚದಲ್ಲಿ ಈ ರೀತಿ ವೈಜ್ಞಾನಿಕವಾಗಿ ರಚಿತವಾದ ಭಾಷೆಗಳಲ್ಲಿ ಭಾರತದ ಭಾಷೆಗಳು ಅತ್ಯಂತ ನಿಖರ ವಿಜ್ಞಾನದ ತಳಹದಿಯಲ್ಲಿ ರಚಿತವಾಗಿವೆ. ಪ್ರತಿಯೊಬ್ಬರೂ ತಮ್ಮ ಭಾಷೆಯ ಬಗ್ಗೆ ಹೀಗೆಯೇ ಹೇಳುತ್ತಾರೆ ಎಂದುಕೊಳ್ಳಬೇಡಿ. ನಾವೀಗ ನಮ್ಮ ಭಾರತೀಯ ಭಾಷೆಗಳು ಹೇಗೆ ವಿಜ್ಞಾನದ ತಳಹದಿಯ ಮೇಲೆ ರಚಿತವಾಗಿವೆ ಎಂಬುದನ್ನು ಉದಾಹರಣೆಯ ಸಮೇತ ವಿವರಿಸಲಿದ್ದೇವೆ. ಭಾರತದ ಭಾಷೆಯ ವರ್ಣಮಾಲೆಯ ಪ್ರತಿಯೊಂದು ಅಕ್ಷರವೂ ತಾರ್ಕಿಕವಾಗಿದೆ ಮತ್ತು ಲೆಕ್ಕಾಚಾರದಿಂದ ಕೂಡಿದೆ. ಆದರೆ ಯಾವುದೇ ವಿದೇಶಿ ಭಾಷೆಗಳು ಈ ತಾರ್ಕಿಕತೆಯ ಮೇಲೆ ರಚಿತವಾಗಿಲ್ಲ. ಉದಾಹರಣೆ ನೋಡಿ:
ಕಖಗಘಙ – ಈ ಐದು ಅಕ್ಷರದ ಗುಂಪನ್ನು ಕಾಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ. ಇದನ್ನು ನಾವು ಹೇಳುವುದಲ್ಲ. ನೀವೇ ಈ ಅಕ್ಷರಗಳನ್ನು ಉಚ್ಛರಿಸಿ ನೋಡಿ. ಸತ್ಯ ನಿಮಗೆ ತಿಳಿಯುತ್ತದೆ.
ಚಛಜಝಞ – ಈ ಐದು ಅಕ್ಷರದ ಗುಂಪನ್ನು ಅಂಗುಳ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ. ಇದನ್ನೂ ಸಹ ನೀವು ಹೇಳಿ ನೋಡಬಹುದು.
ಟಠಡಢಣ : ಈ ಐದು ಅಕ್ಷರಗಳ ಗುಂಪನ್ನು ಮುರ್ಧನ್ಯಾ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ. ಈ ಅಕ್ಷರಗಳನ್ನು ಈಗಲೇ ಉಚ್ಛರಿಸಿ. ಪರೀಕ್ಷಿಸಲು ಇದಕ್ಕಿಂತಲೂ ಉತ್ತಮ ಮಾರ್ಗ ಬೇರೊಂದಿಲ್ಲ!
ತಥದಧನ – ಈ ಐದು ಅಕ್ಷರದ ಗುಂಪನ್ನು ದಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ. ಒಮ್ಮೆ ಪ್ರಯತ್ನಿಸಿ, ಪರೀಕ್ಷಿಸದೆ ಮುಂದುವರೆಯಬೇಡಿ!
ಪಫಬಭಮ – ಈ ಐದು ಅಕ್ಷರದ ಗುಂಪನ್ನು ಆಷ್ಟವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ. ಇದನ್ನು ಪರೀಕ್ಷಿಸದೆ ಬಿಡಬೇಡಿ.
ನೋಡಿದಿರಲ್ಲ ನಮ್ಮ ಕನ್ನಡ ಭಾಷೆಯ ವೈಜ್ಷಾನಿಕ ತಳಹದಿಯನ್ನು. ಮತ್ತೇಕೆ ತಡ.. ಇದನ್ನು ಎಲ್ಲರಿಗೂ ಓದಲು ಹೇಳಿ!