Breaking NewsLatestಮನರಂಜನೆಸಿನಿಮಾ

ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿದ ಕನ್ನಡ ರಕ್ಷಣಾ ಕಾರ್ಯಕರ್ತರು

ಬಿಗ್ ಬಾಸ್ ಖ್ಯಾತಿಯ ಋಷಿ ಕುಮಾರ ಸ್ವಾಮಿಜೀಯ ಮೇಲೆ ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದಿದ್ದಾರೆ.

ಋಷಿ ಕುಮಾರ ಸ್ವಾಮಿಜೀ ರಾಷ್ಟ್ರಕವಿ ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ. ಖುಷಿ ಕುಮಾರ ಸ್ವಾಮಿಜಿ ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಸ್ವಾಮೀಜಿಗೆ ದಿಕ್ಕಾರ ಕೂಗಿ ಮುಖಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

ದೇವಾಲಯದ ಬಳಿ ಋಷಿಕುಮಾರ ಸ್ವಾಮೀಜಿ ಮತ್ತು ಕನ್ನಡ ಸಂಘಟನೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಋಷಿಕುಮಾರ ಸ್ವಾಮೀಜಿ ಸಾಕಷ್ಟು ಸಮರ್ಥನೆಯನ್ನು ನೀಡಿದರು, ಇದಕ್ಕೆ ಒಪ್ಪದ ಕನ್ನಡ ಪರ ಸಂಘಟನೆಗಳು ಋಷಿಕುಮಾರ ಸ್ವಾಮೀಜಿಗೆ ಮಸಿಯನ್ನು ಬಳಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಖುಷಿ ಕುಮಾರ ಸ್ವಾಮಿಜಿ

“ತಾವು ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿಲ್ಲ. ತಾಕತ್ ಇದ್ದರೇ ತನ್ನ ಮೇಲೆ ಮಾಡಿರುವ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಲಿ. ನನಗೆ‌ ಮಸಿ ಬಳಿದಿದ್ದಾರೆ ನನ್ನ ಮುಖವನ್ನು ನಾನು ಕನ್ನಡಿಯಲ್ಲಿ ನೋಡಿಕೊಂಡಾಗ ಸಂತೋಷ ಆಯ್ತು.‌ ಕಾಳಿಯ ಬಣ್ಣವೂ ಕಪ್ಪು ನನಗೂ ಬಳಿದಿರುವ ಬಣ್ಣವೂ ಕಪ್ಪು ಎಂದಿದ್ದಾರೆ. ನಾನು ಹೆದರುವವನಲ್ಲ ಎಲ್ಲವನ್ನು ಎದುರಿಸುತ್ತೇನೆ. ಈ ಘಟನೆಯನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ,” ಎಂದರು.

Spread the love

Related Articles

Leave a Reply

Your email address will not be published.

Back to top button