Breaking NewsLatestವಿದೇಶಸುದ್ದಿ

ಬಾಲಕರನ್ನು ಕೊಲ್ಲಲು ಕಿಮ್ ಆದೇಶ : ಸೌತ್ ಕೊರಿಯಾ ಸೀರೀಸ್ ನೋಡ್ತಿದ್ದ ಬಾಲಕರಿಗೆ ಗುಂಡು!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾಡಲ್ಲಿ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳ ಕೊಲೆಯಾಗಿದೆ.
ಈ ಇಬ್ಬರು ವಿದ್ಯಾರ್ಥಿಗಳು ಸೌತ್ ಕೊರಿಯಾ ಸೀರೀಸ್ ನೋಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಇಬ್ಬರು ಬಾಲಕರನ್ನು ಕೊಲ್ಲಲು ಕಿಮ್ ಆದೇಶ ನೀಡಿದ್ದು, ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ.

ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ನೋಡುವುದು ಅಪರಾಧವಾಗಿದೆ. ಆದರೂ ಬಾಲಕರು ಸಿನಿಮಾ ನೋಡಿದ್ದರು ಎಂದು ಅವರನ್ನು ಕೊಲ್ಲಲಾಗಿದೆ. ಬಾಲಕರನ್ನು ಕೊಲ್ಲುವುದನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಇಲ್ಲಿನ ಜನರಿಗೆ ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ಸಂಗೀತದ ಮೇಲೆ ಸಾಕಷ್ಟು ಕ್ರೇಜ್ ಇದೆ. ಫ್ಲ್ಯಾಶ್ ಡ್ರೈವ್‌ಗಳು, ಎಸ್‌ಡಿ ಕಾರ್ಡ್‌ಗಳ ಮೂಲಕ ಸಿನಿಮಾಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಬೇರೆ ಬೇರೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡರೆ ಸರ್ವಾಧಿಕಾರ ನಡೆಸುವುದು ಕಷ್ಟ ಎಂದು ಕಿಮ್ ನಂಬಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button