Breaking NewsLatestರಾಷ್ಟ್ರೀಯ

ಅಮಿತ್ ಶಾ ಹಾಗೂ ಮೋದಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್​ ಶಾಗೆ ಬೆದರಿಕೆ ಹಾಕಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಹೈದರಾಬಾದ್ ಮೂಲದ ಅಬ್ದುಲ್ ಮಜೀದ್ ಅತ್ತಾರ್​ನನ್ನು ಹೈದರಾಬಾದ್​ನ ಮೊಘಲ್​ಪುರ ಪೊಲೀಸರು ಬಂಧಿಸಿದ್ದಾರೆ.

ಆತ ಮಜ್ಲಿಸ್ -ಎ-ಇಂಕ್ವಿಲಾಬ್-ಎ-ಮಿಲ್ಲಾದ ರಾಷ್ಟ್ರೀಯ ಸಂಚಾಲಕನಾಗಿದ್ದಾನೆ. ನೂಪುರ್​ ಶರ್ಮಾ ಹೇಳಿಕೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಅಬ್ದುಲ್,  ಆರೆಸ್ಸೆಸ್ ಮತ್ತು ಬಿಜೆಪಿಯ ಉನ್ನತ ನಾಯಕರು ಕ್ಷಮೆಯಾಚಿಸಲಿ ಎಂದು ಹೇಳಿದ್ದ.

ಕಮೆಂಟ್‌ಗಳಿಗೆ ಕ್ಷಮೆಯಾಚಿಸಲಿ ಅಥವಾ ಶಿರಚ್ಛೇದಕ್ಕೆ ಸಿದ್ಧರಾಗಿರಿ ಫೇಸ್‌ಬುಕ್​ನಲ್ಲಿ ಪ್ರಚೋದನಕಾರಿ ಪೋಸ್ಟ್ ಆತ ಹಾಕಿದ್ದ ಎಂದು ಹೇಳಲಾಗಿದೆ. ಅಬ್ದುಲ್ ಮಜಿದ್ ಅತ್ತಾರ್ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಉದ್ದೇಶ ಹಾಗೂ ಕೋಮು ದ್ವೇಷ ಮೂಡಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ

Spread the love

Related Articles

Leave a Reply

Your email address will not be published.

Back to top button