ರಮೇಶ್ ಜಾರಕಿಹೊಳಿ ಅವರ ಜೊತೆ ನಾವಿದ್ದೇವೆ: ಸಚಿವ ಬೈರತಿ ಬಸವರಾಜ್

ಹುಬ್ಬಳ್ಳಿ : ರಮೇಶ್ ಜಾರಕಿಹೊಳಿಯವರು ಯಾವದೋ ಉದ್ವೇಗದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದಂತೆ ಅವರ ಸಹೋದರರು ಈಗಾಗಲೇ ತಿಳಿ ಹೇಳಿದ್ದಾರೆ. ಅಲ್ಲದೆ ನಾವು ರಮೇಶ ಜಾರಕಿಹೊಳಿಯವರ ಜೊತೆಗೆ ಇದ್ದೇವೆ, ಮುಂದೆಯು ನಾವೆಲ್ಲರು ಇರುತ್ತೆವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಬಾಂಬೆ ದೆಹಳಿ ಪ್ರಯಾಣ ಕುರಿತು ಮಾತನಾಡಿ, ಈಗಾಗಲೇ ರಮೇಶರವರಿಗೆ ಅವರ ಸಹೋದರರು, ಆತಿರ ನಿರ್ಧಾರ ಬೇಡವೆಂದು ತಿಳಿ ಹೇಳಿದ್ದಾರೆ. ಈಗ ಆರೋಪ ಬಂದಿದೆ. ಆರೋಪದಿಂದ ಮುಕ್ತರಾಗುವವರೆಗೂ ಸಮಾಧಾನವಾಗಿರಲು ತಿಳಿಸಿದ್ದಾರೆ. ಹಾಗಾಗಿ ಅವರು ರಾಜಿನಾಮೆ ನೀಡುವ ಪ್ರಶ್ನೆ ಇಲ್ಲಾ ಜೊತೆಗೆ ಸರ್ಕಾರ ಅಸ್ಥಿರಗೊಳ್ಳೋ ಪ್ರಶ್ನೆಯೇ ಇಲ್ಲ ಎಂದರು.
ಸಣ್ಣ ಪುಟ್ಟ ತೊಂದರೆಗಳು ಆಗಿರಬಹುದು ಅವುಗಳು ಕೂಡಾ ಶೀಘ್ರವಾಗಿ ಬಗೆಹರಿಯುತ್ತವೆ. ರಮೇಶ್ ಜಾರಕಿಹೊಳಿಯವರ ಜೊತೆಗೆ ಈ ಹಿಂದೆಯೂ ಅವರ ಜೊತೆ ಇದ್ವಿ, ಈಗಲೂ ಅವರ ಜೊತೆಗೆ ಇದ್ದೇವೆ ಮುಂದೆಯೂ ನಾವೆಲ್ಲಾ ಅವರೊಂದಿಗೆ ಇರುತ್ತೇವೆ, ಅಲ್ಲದೆ ರಮೇಶ ಅವರ ಪ್ರಕರಣದ ಬಗ್ಗೆ ಎಸ್ ಟಿ ಯಲ್ಲಿ ತನಿಖೆ ನಡೆಸುತ್ತಿದೆ. ಏನು ತೀರ್ಮಾನ ಆಗುತ್ತೋ ನೋಡೋಣ ಎಂದು ತಿಳಿಸಿದರು.