ಕಾಂಗ್ರೆಸ್ನಲ್ಲಿ ಸಿಎಂ ಬಗ್ಗೆ ಹೈಕಮಾಂಡ್, ಶಾಸಕರ ತೀರ್ಮಾನ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಅವರವರ ಅಭಿಮಾನಕ್ಕೆ ಹೇಳುತ್ತಾರೆ. ದೊಡ್ಡ ಕಾರ್ಯಕರ್ತರ ಪಡೆ ಇರುತ್ತೆ. ಒಬ್ಬರು ಅವರು ಸಿಎಂ, ಇನ್ನೊಬ್ಬರು ಇವರ ಸಿಎಂ ಎನ್ನುತ್ತಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಹೈಕಮಾಂಡ್, ಶಾಸಕರು ಆಯ್ಕೆ ಮಾಡಬೇಕಾಗುತ್ತೆ. ಈಗ ಹೇಳೋದು ತಾತ್ಪೂರ್ತಿಕ ಅಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ 113 ಸ್ಥಾನ ಶಾಸಕರು ಆಯ್ಕೆಯಾಗಬೇಕು. ಅದಕ್ಕೆ ಹೈಕಮಾಂಡ್ ಒಪ್ಪಿಗೆ ಕೊಡಬೇಕು ಅಂದಾಗ ಮುಖ್ಯಮಂತ್ರಿ ಆಗುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇದು ಹೊಸದೇನಲ್ಲ, ಮುಂದೆ ಹೀಗೆ ನಡೆಯುತ್ತೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲಿನಿಂದಲೂ ಇಬ್ಬರು ಮೂವರು ಜನ ಇದ್ದಾರೆ. ಇದು ಹೊಸದೇನಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಬ್ಬರೂ, ಮೂವರು ಇದ್ದೇ ಇದ್ದಾರೆ. ಅಂತಿಮವಾಗಿ ಹೈಕಮಾಂಡ್ ಒಬ್ಬರನ್ನೆ ಆಯ್ಕೆ ಮಾಡುತ್ತೆ ಎಂದರು.
ಮುಖ್ಯಮಂತ್ರಿಗಾಗಿ ಬಣ ರಾಜಕಾರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷಕ್ಕೆ ಡ್ಯಾಮೇಜ್ ಆಗೋಲ್ಲ. ಯಾರು ಯಾರನ್ನು ಪಕ್ಷದೊಳಗೆ ಸೋಲಿಸಿಕ್ಕೆ ಹೋಗಲ್ಲ.ನಾವು 113 ಸ್ಥಾನ ಬರಲೇಬೇಕು. ಹಿಂದೆ ಪರಮೇಶ್ವರ್ ಡಿಸಿಎಂ ಆಗಿದ್ದವರು. ಗೆದ್ದಿದ್ದರೆ ನಾನು ಸಿಎಂ ಆಗುತ್ತಿದ್ದೇ ಅನ್ನೋದು ಪರಮೇಶ್ವರ್ ಕ್ಲೇಮ್ ಇದೆ. ಖರ್ಗೆಯವರಿದ್ದಾರೆ. ನಮ್ದು ಕ್ಲೇಮ್ ಇಲ್ಲ. ನಮ್ದು ಇನ್ನೂ ವಯಸ್ಸಿದೆ, ತಾಳ್ಮೆಯಿದೆ. ಅವರೆಲ್ಲ ಈಗ ಆಗಲಿ. ನಾವು ಮುಂದೆ ಅರ್ಜಿ ಕೊಡುತ್ತೇವೆ. ನಮಗೂ ಒಂದಿನ ಕಾಲಾವಕಾಶ ಬರುತ್ತೆ, ನಮ್ದು ಅರ್ಜೆಂಟ್ ಇಲ್ಲ ಎಂದು ತಿಳಿಸಿದರು.
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಿಸಿ -ಶಾಸಕ ಅಖಂಡ್ ಶ್ರೀನಿವಾಸ ಹೇಳಿಕೆ ವಿಚಾರಕ್ಕೆ, ನಾವಂತೂ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ. ಈಗ ಘೋಷಣೆ ಮಾಡೋಕೆ ಅವಕಾಶ ಇಲ್ಲ. ಈಗ ಚುನಾವಣೆ ಕೂಡಾ ಆಗಿಲ್ಲ. ಚುನಾವಣೆ ಆದಮೇಲೆ ಶಾಸಕರ ಸಭೆಯಲ್ಲಿ ತೀರ್ಮಾನವಾಗುತ್ತೆ. ಅಲ್ಲಿಯವರೆಗೆ ಕಾಯಬೇಕು.ಈಗ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ನಮ್ಮ ಪರ ಹೇಳುತ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಜಮೀರ್ ಅಹಮ್ಮದ್ ಖಾನ್ ಗೊಂದಲ ಹೇಳಿಕೆ ವಿಚಾರಕ್ಕೆ ಜಮೀರ್ ಅಹಮ್ಮದ್ ಖಾನ್ ಆಲ್ ರೌಂಡರ್. ಹಾಗೆ ಸಿಕ್ಸರ್ ಹೊಡೆಯುತ್ತಾರೆ .ಗೆಲ್ಲಬೇಕಾದಾಗ ಕಳಿಸುವ ಹಾಗೆ ಸಿಕ್ಸರ್ ಬಾರಿಸುತ್ತಾರೆ ಎಂದು ತಿಳಿಸಿದರು.
ಇನ್ನು ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ವಿಚಾರಕ್ಕೆ ಅವರು ಯಾಕೆ ರಾಜಿನಾಮೆ ಕೊಡುತ್ತಿದ್ದಾರೆ ಅನ್ನೋದು ಆ ಪಕ್ಷದವರು ಹೇಳಬೇಕು. ನಾವು ವಿರೋಧ ಪಕ್ಷದಲ್ಲಿದ್ದು, ನಮಗೆ ಸಂಬಂಧಪಡದ ವಿಷಯವದು. ರಾಜ್ಯದಲ್ಲಿ ಸರ್ಕಾರ ಇಲ್ಲವೇ ಇಲ್ಲ. ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ. ಅತಿವೃಷ್ಟಿಯಿಂದ ಹಾನಿಯಾದ ಮನೆಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲವೆಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.