Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ಕೈಲಾಸ: ”ನಾನು ನೂರಾರು ರಾತ್ರಿಗಳನ್ನು ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಕಳೆದಿದ್ದೇನೆ. ಯಾವುದೇ ಪ್ಲಾೃನ್ ಇಲ್ಲದೇ ನಾನು ರೈಲು ಹತ್ತಿ ಹೊರಟು ಬಿಡುತ್ತಿದ್ದೆ. ಎಲ್ಲಿ ಹತ್ತುತ್ತೇನೋ ಎಲ್ಲಿ ಇಳಿಯುತ್ತೇನೋ ನನಗೇ ಗೊತ್ತಾಗುತ್ತಿರಲಿಲ್ಲ…” ಎಂದು ವಿವಾದಿತ ಸ್ವಾಮಿ ನಿತ್ಯಾನಂದ ಹೇಳಿದ್ದಾನೆ.

ಆತ ಸ್ವಯಂ ಘೋಷಿತ ಕೈಲಾಸ ದೇಶವನ್ನು ನಿರ್ಮಿಸಿಕೊಂಡು ಅಲ್ಲೇ ವಾಸವಾಗಿರುವುದು ಈಗಾಗಲೇ ನಿಮಗೆಲ್ಲ ಗೊತ್ತಿರುವ ಸಂಗತಿ. ಅಲ್ಲಿ ತನ್ನ ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ಸ್ವಾಮಿ ನಿತ್ಯಾನಂದ, ”ನಾನು ರೈಲಿನಲ್ಲಿ ಹೀಗೆ 9 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಿಗೆ ತಿರುಗಾಡಿದ್ದೇನೆ. ಯಾವತ್ತೂ ನಾನು ರೈಲಿನ ಟಿಕೆಟ್ ಖರೀದಿ ಮಾಡುತ್ತಲೇ ಇರಲಿಲ್ಲ. ಟಿಟಿಗಳು ಟಿಕೆಟ್ ತಪಾಸಣೆ ಮಾಡಲು ಬಂದರೆ ಟಿಕೆಟ್ ಕೇಳುತ್ತಿರಲಿಲ್ಲ. ಬದಲಿಗೆ, ನನ್ನ ಕಾವಿ ಬಟ್ಟೆಯನ್ನು ನೋಡಿ, ‘ಬಾಬಾ ಊಟ ಮಾಡಿದ್ರಾ’ ಅಂತ ಕೇಳುತ್ತಿದ್ದರು. ಮಾಡಿದ್ದೇನೆ ಎಂದರೆ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದರು. ಊಟ ಆಗಿಲ್ಲ ಎಂದರೆ ಅವರೇ ಊಟವನ್ನು ತಂದುಕೊಡುತ್ತಿದ್ದರು” ಎಂದು ಹೇಳಿಕೊಂಡಿದ್ದಾನೆ.

”ರೈಲ್ವೆಯಲ್ಲಿರುವ ಜನ ಒಳ್ಳೆಯವರು. ಅದರಲ್ಲೂ ರೈಲ್ವೆ ಇಲಾಖೆಯಲ್ಲಿರುವ ಉತ್ತರ ಭಾರತದ ಮಂದಿ ಬಹಳ ಒಳ್ಳೆಯವರು. ಅವರೆಲ್ಲ ಧಾರ್ಮಿಕ ಮನೋಭಾವದವರು. ಸಂತರು, ಸಾಧುಗಳನ್ನು ಕಂಡರೆ ಸಾಕಷ್ಟು ಮರ್ಯಾದೆ ಕೊಡುತ್ತಾರೆ. ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ ಉತ್ತರ ಭಾರತದವರೇ ನಮ್ಮಂಥ ಕಾವಿಧಾರಿಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಸದ್ಯದಲ್ಲೇ ನಾನು ಇದನ್ನೆಲ್ಲ ನನ್ನ ಜೀವನ ಚರಿತ್ರೆಯಲ್ಲಿ ಬರೆಯುವವನಿದ್ದೇನೆ” ಎಂದು ನಿತ್ಯಾನಂದ ಹೇಳಿದ್ದಾನೆ.

Spread the love

Related Articles

Leave a Reply

Your email address will not be published. Required fields are marked *

Back to top button