Breaking NewsLatestಜಿಲ್ಲಾ ಸುದ್ದಿಬೆಳಗಾವಿರಾಜಕೀಯರಾಜ್ಯ

ರಾಜೀನಾಮೆ ವಿಚಾರಕ್ಕೆ ಫುಲ್​ಸ್ಟಾಪ್; ವರಿಷ್ಠರಿಗೆ ರಮೇಶ್ ಜಾರಕಿಹೊಳಿ ಸಂದೇಶ

ಬೆಳಗಾವಿ: ಕೊನೆಗೂ ಗೋಕಾಕ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಪಟ್ಟು ಸಡಿಲಿಸಲು ಮುಂದಾ ಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಅವರು ಇದೀಗ ಅಂಥ ನಿರ್ಧಾರದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಸಿಲುಕಿದ್ದ ಅವರಿಗೆ ಅದರಿಂದ ಹೊರಬರಲು ಬಿಜೆಪಿ ಸರಕಾರ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡದೆ ಇರುವುದರಿಂದ ಬುಧವಾರ ಜೂನ್ 23 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ದಿನ ನಿಗದಿ ಪಡಿಸಿದ್ದರು. ಅದರಂತೆ ಮುಂಬೈಗೆ ಹೋಗಿ ಭಾರೀ ಕಾರ್ಯತಂತ್ರ ಹೆಣೆದಿದ್ದರು ಆದರೆ ಈ ಇದೀಗ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಯೋಜಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಮೇಶ್ ಜಾರಕಿಹೊಳಿ ನೇರ ಕಾರಣವಾಗಿದ್ದು ಆಗ ಸರ್ಕಾರ ರಚನೆ ಸಂಬಂಧ ಮುಂಬಯಿಗೆ ತೆರಳಿ ಕಾರ್ಯತಂತ್ರ ಹೆಣೆದಿದ್ದರು. ಆಗ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ರಮೇಶ್ ಅವರಿಗೆ ಬೇಕಾದ ಎಲ್ಲಾ ವಿಧದ ಬೆಂಬಲ ಹಾಗೂ ರಕ್ಷಣೆಯನ್ನು ಫಡ್ನವಿಸ್ ನೀಡಿದ್ದರು. ಅಂದಿನಿಂದ ರಮೇಶ್ ಹಾಗೂ ಪಡ್ನವಿಸ್ ನಡುವಿನ ಗೆಳೆತನ ಅತ್ಯಂತ ಸುಮಧುರವಾಗಿತ್ತು.

ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲು ಯಾವ ರೀತಿಯಲ್ಲಿ ತ್ಯಾಗ ಮಾಡಿದ್ದೇನೆ ಎನ್ನುವುದನ್ನು ಸಂಪೂರ್ಣವಾಗಿ ನೆನಪಿಸಿದ ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಲ್ಲಿ ತನ್ನನ್ನೂ ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ ಎನ್ನುವುದನ್ನು ಫಡ್ನವಿಸ್ ಅವರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಆರ್ಟ್ ಪಕ್ಷವಾಗಿದ್ದರೂ ಬಿಜೆಪಿ ಯಿಂದ ತನಗೆ ಸೂಕ್ತ ಸಹಕಾರ ಬೆಂಬಲ ಸಿಗದಿರುವ ಬಗ್ಗೆ ಫಡ್ನವಿಸ್ ಅವರ ಬಳಿ ದೂರು ಸಲ್ಲಿಸಿದ ಜಾರಕಿಹೊಳಿಯವರು ಇದೇ ರೀತಿ ನಡೆದರೆ ಅದು ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಉಚಿತವಾಗದು. ತಾನು ರಾಜೀನಾಮೆ ನೀಡುತ್ತೇನೆ ಎಂದು ಖಂಡತುಂಡವಾಗಿ ಹೇಳಿದ್ದಾರೆ ಎನ್ನಲಾಗಿದೆ.

ರಮೇಶ್ ಹೇಳಿದ ಮಾತುಗಳನ್ನು ಸಮಾಧಾನಚಿತ್ತರಾಗಿ ಆಲಿಸಿದ ದೇವೇಂದ್ರ ಫಡ್ನವೀಸ್ ಅವರು ಸದ್ಯಕ್ಕೆ ತಾಳ್ಮೆಯಿಂದ ಇರಿ ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗೆ ಬೇಕಾದ ಸಹಾಯ ಸಹಕಾರ ನೀಡಲು ಬಿಜೆಪಿ ಹಾಗೂ ಕರ್ನಾಟಕದ ಯಡಿಯೂರಪ್ಪ ಸರ್ಕಾರ ಸಿದ್ಧವಿದೆ. ಆ ಬಗ್ಗೆ ನಾನೇ ಸ್ವತಃ ಬಿಜೆಪಿ ನಾಯಕರ ಬಳಿ ಮಾತನಾಡುವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ನಿಮ್ಮ ತ್ಯಾಗ ಬಿಜೆಪಿಗೆ ಅರಿವಿದೆ. ತಮ್ಮ ಪಕ್ಷದಿಂದ ಎಲ್ಲಾ ಸಹಾಯವನ್ನು ದೊರಕಿಸಿಕೊಡಲು ಸಹಕರಿಸುವುದಾಗಿ ಅವರು ವಚನ ನೀಡಿದ್ದಾರೆ.

ದೇವೇಂದ್ರ ಫಡ್ನವಿಸ್ ಅವರ ಸಮಾಧಾನ ಚಿತ್ತದ ಭರವಸೆ ಯನ್ನು ಆಲಿಸಿದ ರಮೇಶ ಜಾರಕಿಹೊಳಿ ಸ್ನೇಹಿತನ ಮಾತಿಗೆ ಕೊನೆಗೂ ಮಣಿದಿದ್ದಾರೆ. ಸದ್ಯಕ್ಕೆ ರಾಜಿನಾಮೆ ನೀಡುವ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಕರ್ನಾಟಕಕ್ಕೆ ಬಂದು ತಮ್ಮ ವಿರುದ್ಧದ ನ್ಯಾಯಾಂಗ ಹೋರಾಟ ಅದರ ಬಗೆಗೆ ಇನ್ನಷ್ಟು ಕಾರ್ಯತಂತ್ರ ಹೆಣೆಯಲು ಅವರು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button