ʼಪಠಾಣ್‌' ಹಾಡಿನ ವಿವಾದ: ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಈಗಲೂ ಪ್ರಶ್ನೆ; ಅಮಿತಾಭ್‌

ʼಪಠಾಣ್‌' ಹಾಡಿನ ವಿವಾದ: ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಈಗಲೂ ಪ್ರಶ್ನೆ; ಅಮಿತಾಭ್‌

ಕೋಲ್ಕತಾ: ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಈಗಲು ಪ್ರಶ್ನೆಗಳು ಏಳುತ್ತವೆ ಎಂದು ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಹೇಳಿದರು.

ಕೋಲ್ಕತಾದಲ್ಲಿ ನಡೆದ 28ನೇ ಕೋಲ್ಕತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು “ಪಠಾಣ್‌’ ಸಿನಿಮಾದ “ಬೇಷರಮ್‌ ರಂಗ್‌’ ಹಾಡಿನ ದೃಶ್ಯಗಳ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಿದ್ದಾರೆ.

“ಸಿನಿಮಾ ಸೆನ್ಸಾರ್‌ಶಿಪ್‌ಗಾಗಿ 1952ರಲ್ಲಿ ಸಿನಿಮಾಟೋಗ್ರಾಫ‌ರ್‌ ಕಾಯಿದೆ ರಚಿಸಲಾಯಿತು. ಫಿಲ್ಮ್ ಸರ್ಟಿಫಿಕಲೇಶನ್‌ ಬೋರ್ಡ್‌ ಸಿನಿಮಾ ಸೆನ್ಸಾರ್‌ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈಗಲೂ ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳು ಏಳುತ್ತವೆ.’ ಎಂದರು.

ಇದೇ ವೇಳೆ ಮಾತನಾಡಿದ “ಪಠಾಣ್‌’ ಸಿನಿಮಾ ನಟ ಶಾರುಕ್‌ ಖಾನ್‌, “ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕತೆ ಹರಡುವುದು ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. ಸಂಕುಚಿತ ಮನೋಭಾವದಿಂದ ವಿಚಾರಗಳನ್ನು ನೋಡಲಾಗುತ್ತಿದೆ. ಜಗತ್ತು ಏನಾದರು ಆಗಲಿ, ಆದರೆ ಈಗಲೂ ಸಕಾರಾತ್ಮಕ ವ್ಯಕ್ತಿಗಳು ಜೀವಂತವಾಗಿದ್ದಾರೆ.’ ಎಂದು ಹೇಳಿದರು.