Breaking NewsLatestಜಿಲ್ಲಾ ಸುದ್ದಿತುಮಕೂರುರಾಜ್ಯಸುದ್ದಿ

ನನ್ನ ಶವ ದಾಟಿಕೊಂಡು ಹೋಗಿ ಎಂದ ಪಿಎಸ್ಐ: ಸೈಲೆಂಟಾದರು ಪ್ರತಿಭಟನಾಕಾರರು!

ತುಮಕೂರು : ಜಿಲ್ಲಾಧಿಕಾರಿ ಕಚೇರಿಯೆದುರು ವಸತಿ ಹಾಗೂ ಭೂಮಿ ಕಲ್ಪಿಸುವಂತೆ ಒತ್ತಾಯಿಸಿ ನಾಗವಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ರಾತ್ರಿ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ಅವಕಾಶ ನೀಡದ ಪ್ರಸಂಗ ನಡೆಯಿತು. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.


ಸ್ಥಳದಲ್ಲಿದ್ದ ಸಬ್ ಇನ್ಸ್​ಪೆಕ್ಟರ್​ ನವೀನ ಅವರು, ನಾನೊಬ್ಬ ಸೆಕ್ಯೂರಿಟಿ ಗಾರ್ಡ್ ಆಗಿ ದೇಶವನ್ನು ಪಾಲನೆ ಮಾಡುತ್ತಿದ್ದೇನೆ. ನೀವುಗಳು ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಲು ಯತ್ನಿಸಬೇಕು ಎಂದರೆ ನನ್ನ ಶವದ ಮೇಲೆ ಹೋಗಬೇಕು ಎಂದು ನುಡಿದರು.


ಇದರಿಂದ ಕಕ್ಕಾಬಿಕ್ಕಿಯಾದ ಪ್ರತಿಭಟನಾಕಾರರು, ಪೊಲೀಸರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸುವುದಿಲ್ಲ. ನೀವು ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋಗಬೇಡಿ ಎಂದರೆ ನಾವು ಹೋಗುವುದಿಲ್ಲ ಎಂದು ಪೊಲೀಸರನ್ನೇ ಸಮಾಧಾನ ಪಡಿಸಿದರು.

Spread the love

Related Articles

Leave a Reply

Your email address will not be published.

Back to top button