ರಮೇಶ್ ಜಾರಕಿಹೊಳಿ ನಡೆ ದೆಹಲಿ ಕಡೆ: ಜುಲೈ ಮೊದಲ ವಾರ ಹೈಕಮಾಂಡ್ ಬುಲಾವ್ ಸಾಧ್ಯತೆ..?

- ವರದಿ : ಮಲ್ಲಿಕ್ ಜಾನ್
ಬೆಳಗಾವಿ : ಮುಂಬೈ, ಸುತ್ತೂರು ಮಠ, ಬೆಂಗಳೂರು ಭೇಟಿ , ಆರ್ಎಸ್ಎಸ್ ನಾಯಕರ ಭೇಟಿ ನಂತರ ಈಗ ಶಾಸಕ ರಮೇಶ್ ಜಾರಕಿಹೊಳಿಗೆ ದೆಹಲಿ ಹೈಕಮಾಂಡ್ ಬುಲಾವ್ ನೀಡಿದೆ, ಸಿಡಿ ಕೇಸ್ ನಂತರ ಜರ್ಜರಿತಗೊಂಡಿರುವ ರಮೇಶ್ ಜಾರಕಿಹೊಳಿ ಅಧಿಕಾರಿ ಕಳೆದುಕೊಂಡು ರೆಕ್ಕೆ ಇಲ್ಲದ ಹಕ್ಕಿಯಂತೆ ಒದ್ದಾಡುತ್ತಿದ್ದಾರೆ, ಸಿಡಿ ಕೇಸ್ ನಲ್ಲಿ ನನ್ನನ್ನು ಸ್ವಪಕ್ಷದ ಇಬ್ಬರು ನಾಯಕರೇ ಸಿಲುಕಿಸಿದ್ದು ಎಂದು ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದು ,ಅವರ ಮೇಲೆ ಹಠ ಸಾಧಿಸುತ್ತಿದ್ದಾರೆ, ಹೇಗಾದ್ರು ಮಾಡಿ ಸಿಡಿ ಕೇಸ್ ನಲ್ಲಿ ಖುಲಾಸೆ ಗೊಳ್ಳಬೇಕು ಮತ್ತೆ ಮಂತ್ರಿಗಿರಿ ಪಡೆಯಬೇಕು ಎನ್ನುವುದೇ ಸಾಹುಕಾರ ನಡೆಯ ಸ್ಪಷ್ಟ ನೋಟವಾಗಿದ್ದು ಈ ಕುರಿತು ಫೈನಲ್ ಮಾತುಕತೆ ಈಗ ಹೈಕಮಾಂಡ್ ಅಂಗಳಕ್ಕೆ ಚೆಂಡು ತೆರಳಿದೆ.
ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬದಲಾವಣೆಗಳು ನಡೆಯುತ್ತಿದ್ದು ಇದೆಲ್ಲವನ್ನ ಬಿಜೆಪಿ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ನೂ ರಮೇಶ ಜಾರಕಿಹೊಳಿ ರಾಜೀನಾಮೆ ವಿಚಾರ ಕೂಡ ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದೆ. ಸಿಡಿ ಕೇಸ್ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ ಸರಿಸುಮಾರು 5 ತಿಂಗಳುಗಳ ಕಾಲ ಸೈಲೆಂಟ್ ಆಗಿದ್ರು. ಆದ್ರೆ ಯಾವಾಗ ಸಿಡಿ ಪ್ರಕರಣದಲ್ಲಿ ಸ್ವಪಕ್ಷಿಯರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಆರಂಭಿಸಿದ್ರೋ ಆಗಲೇ ಜಾರಕಿಹೊಳಿ ಬ್ರದರ್ಸ ಕೆರಳಿ ಕೆಂಡವಾಗಿದ್ದಾರೆ.
ಸ್ವಪಕ್ಷಿಯರ ನವರಂಗಿ ಆಟದಿಂದ ಕೆರಳಿದ ಸಾಹುಕಾರ್ ಮುಂಬೈಗೆ ತೆರಳಿ ನಿರಂತರ ಸಭೆ ನಡೆಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರಕ್ಕೆ ಬಂದು ಬಿಟ್ಟಿದ್ರು, ನೇರವಾಗಿ ಮುಂಬೈಗೆ ತೆರಳಿ ಸ್ವಪಕ್ಷೀಯರ ನವರಂಗಿ ಆಟವನ್ನ ಸಾಕ್ಷಿ ಸಮೇತ ಬಿಚ್ಚಿಟ್ಟಿದ್ರು. ರಮೇಶ ಜಾರಕಿಹೊಳಿ ಮನವೊಲಿಸಿದ ದೇವೆಂದ್ರ ಫಡ್ನವೀಸ್ ನೇರವಾಗಿ ಜೆ.ಪಿ.ನಡ್ಡಾ, ಅಮಿತ್ ಶಾ ಹಾಗೂ ಬಿ ಎಲ್ ಸಂತೋಷ್ ಜೊತೆಗೆ ಮಾತನಾಡಿದ್ದಾರೆ.
ಹೀಗಾಗಿ ಜುಲೈ ಮೊದಲ ವಾರದಲ್ಲಿ ರಮೇಶ ಜಾರಕಿಹೊಳಿಯವರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ವತಿಯಿಂದ ಬುಲಾವ ಬರುವ ಸಾಧ್ಯತೆ ಇದ್ದು, ಈಗಾಗಲೇ ಈ ಕುರಿತು ದೆಹಲಿ ಮೂಲಗಳಿಂದ ಜಾರಕಿಹೊಳಿ ಸಹೋದರರಿಗೆ ಬಲ್ಲ ಮೂಲಗಳು ಸಂದೇಶ ತಲುಪಿಸಿವೆ ಎನ್ನಲಾಗಿದೆ.