Breaking NewsLatest
ಕರ್ನಾಟಕದಲ್ಲಿ ಕೆ 23 ಗ್ಯಾಂಗ್ ಗೆ ಮುಹೂರ್ತ ಇಟ್ಟ ಕುಮಾರಿ ರಮ್ಯಾ

ಕಳೆದ ಮೂರು ನಾಲ್ಕು ದಿನಗಳಿಂದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಾಡುತ್ತಿರುವ ಟ್ವೀಟ್ ರಾಜಕೀಯದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ್ ರಮ್ಯಾ ಟ್ವೀಟ್ ಮೂಲಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಅಲ್ಲಿ ಹೊಂದಾಣಿಕೆಯಿಲ್ಲ. ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಅಂತ ಗೊತ್ತಿಲ್ಲ. ಹೀಗಾಗಿ ಈಗಿನಿಂದಲೇ ಟವೆಲ್ ಹಾಕುವುದಕ್ಕೆ ಹೋಗಿ ಈ ಗಲಾಟೆ ಪ್ರಾರಂಭ ಆಗಿದೆ. ಒಂದು ಕಡೆ ಜಮೀರ್ ಗುಂಪು, ಮತ್ತೊಂದು ಕಡೆ ರಮ್ಯ ಗುಂಪು ಎಂದು ಲೇವಡಿ ಮಾಡಿದ್ದಾರೆ.
ದೆಹಲಿಯಲ್ಲಿ ಜಿ 23 ಗ್ಯಾಂಗ್ ಇದೆ. ಅದೇ ರೀತಿ ಈಗ ಕರ್ನಾಟಕದಲ್ಲಿ ಕೆ 23 ಗ್ಯಾಂಗ್ ಪ್ರಾರಂಭ ಆಗುತ್ತದೆ. ಇಲ್ಲೂ ಕೂಡ ಕೆ 23 ಗ್ಯಾಂಗ್ ಪ್ರಾರಂಭ ಆಗುವುದಕ್ಕೆ ಕುಮಾರಿ ರಮ್ಯಾ ಮುಹೂರ್ತ ಇಟ್ಟಿದ್ದಾರೆ. ಬಣಗಳ ದೊಡ್ಡ ಟೀಮ್ ಕಾಂಗ್ರೆಸ್ ನಲ್ಲಿ ರೆಡಿ ಆಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.