Breaking NewsLatestಉಡುಪಿರಾಜ್ಯಸುದ್ದಿ

ಅಮೆರಿಕದ ಫಿನಿಕ್ಸ್ ನಿಂದ ವೆಂಕಟೇಶ್ವರನಿಗೆ 2 ಕೋ.ರೂ. ಮೌಲ್ಯದ ಸ್ವರ್ಣ ಕಿರೀಟ

ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಭಾವೀ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅಮೆರಿಕದ ಫಿನಿಕ್ಸ್ ನಗರದಲ್ಲಿ ಸ್ಥಾಪಿಸಲ್ಪಟ್ಟ ಪ್ರಥಮ ದೇವಾಲಯದಲ್ಲಿ ಪೂಜೆಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಮೆರಿಕದ ಭಕ್ತರಾದ ಅನಿಲಾ ದಂಪತಿ 2 ಕೋ.ರೂ. ಮೌಲ್ಯದ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಸಮರ್ಪಿಸಿದರು.

ಈ ಕಿರೀಟವು 2023ರ ಜ. 1ರಂದು ಶ್ರೀ ದೇವರ ಮುಕುಟವನ್ನು ಅಲಂಕರಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು. ಪ್ರಧಾನ ಅರ್ಚಕ ಕಿರಣಾಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button