ಒಬ್ಬ ಯುವತಿಯ ಮತಾಂತರಕ್ಕೆ ಐದು ಲಕ್ಷ ಸಿಗುತ್ತೆ: ಸಚಿವ ಅಶೋಕ್

ನಾನು ಗೃಹ ಸಚಿವನಾಗಿದ್ದಾಗ ರಾಜ್ಯದಲ್ಲಿ ಲವ್ಜಿಹಾದ್ ಹಾಗೂ ಆ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕ್ರಮಕೈಗೊಂಡಿದ್ದೆ. ಹೆಣ್ಣು ಮಕ್ಕಳನ್ನು ಲವ್ ಜಿಹಾದ್ಗೆ ತಳ್ಳಲು ಯುವಕರಿಗೆ ಮೊದಲು ತರಬೇತಿ ನೀಡುತ್ತಾರೆ, ದ್ವಿಚಕ್ರ ವಾಹನ ಕೊಡಿಸುತ್ತಾರೆ, ಖರ್ಚಿಗೆ ಹಣ ಕೊಡುತ್ತಾರೆ.
ಒಬ್ಬ ಯುವತಿಯನ್ನು ಮತಾಂತರ ಮಾಡಿದರೆ ₹ 5 ಲಕ್ಷದವರೆಗೆ ಸಿಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಹಣದಲ್ಲಿ ಯುವಕರು ಜಿಮ್ನಲ್ಲಿ ದಂಡಿಸಿ ದೇಹ ಸದೃಢವಾಗಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಖರ್ಚು ಮಾಡುತ್ತಾರೆ. ಮದುವೆಯಾಗಿ ಎರಡು ತಿಂಗಳಲ್ಲಿ ಮತ್ತೆ ಇನ್ನೆರಡು ಮದುವೆ ಆಗುತ್ತಾರೆ. ಇವರ ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ರೂಪದಲ್ಲಿ ಮೇಲೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆಯ ಕಟ್ಟುನಿಟ್ಟಾಗಿ ಜಾರಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ದೇವಾಲಯಗಳಲ್ಲಿಯೂ ಮೊಬೈಲ್ ನಿಷೇಧ ಮಾಡುವುದು ಒಳ್ಳೆಯದು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಬಳಿ ಮಾತನಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ಕಾರ್ಯಕ್ರಮಗಳಿಗೆ ಆಹ್ವಾನ ನೀಡದ್ದಕ್ಕೆ ಯಡಿಯೂರಪ್ಪ ಮುನಿಸಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, ಇದು ಮಾಧ್ಯಮದ ಸೃಷ್ಟಿ. ಎಲ್ಲಾದರೂ ಯಡಿಯೂರಪ್ಪ ಈ ಬಗ್ಗೆ ಹೇಳಿದ್ದಾರಾ, ಎಲ್ಲಾ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿದೆ. ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕ. ಅವರ ನೇತೃತ್ವದಲ್ಲೇ 2023ರ ವಿಧಾನಸಭೆ ಚುನಾವಣೆ ನಡೆಯಲಿದೆ. ಎಂದಿದ್ದಾರೆ.
ರಾಜ್ಯದಲ್ಲೂ ಗುಜರಾತ್ ಮಾದರಿಯಲ್ಲಿ ಯುವಕರಿಗೆ ಬಿಜೆಪಿ ವರಿಷ್ಠರು ಆದ್ಯತೆ ನೀಡುವ ಕುರಿತು ಪ್ರತಿಕ್ರಿಯಿಸಿ,ಗುಜರಾತ್ ಮಾಡೆಲ್ಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಬೇರೆ ರಾಜ್ಯದ ಮಾಡೆಲ್ಗಳನ್ನು ಇನ್ನೊಂದು ರಾಜ್ಯದ ಮೇಲೆ ಹೇರಲ್ಲ. ಸ್ಥಳೀಯ ಜಾತಿ ಸಮುದಾಯ ಗಮನದಲ್ಲಿಟ್ಟುಕೊಂಡು ಟಿಕೆಟ್ನೀಡಲಾಗುತ್ತದೆ ಎಂದು ಹೇಳಿದ್ದಾರೆ.