Breaking Newsಟಿವಿಮನರಂಜನೆಸೆಲೆಬ್ರಿಟಿ
ಹಿರಿಯ ನಟಿ ಬಿ ಜಯಾ ನಿಧನ

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ನಟಿ ಬಿ ಜಯಾ ಅವರು ಇಂದು ನಿಧನ ಹೊಂದಿದ್ದಾರೆ. 75 ವರ್ಷದ ನಟಿ ಬಿ ಜಯಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಕನ್ನಡದಲ್ಲಿ ಆರು ದಶಕಗಳ ಕಾಲ ನಟಿಸಿದ್ದ ಬಿ ಜಯಾ ಇತ್ತೀಚೆಗೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿ, ಹಾಸ್ಯ ನಟಿಯಾಗಿ ಗುರುತಿಸಿಕೊಂಡಿದ್ದ ಇವರು 350ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಅಲ್ಲದೇ ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿ ಪ್ರೇಕ್ಷಕರನ್ನು ಮನರಂಜಿಸಿದ್ದರು.
ವರನಟ ರಾಜ್ಕುಮಾರ್, ಕಲ್ಯಾಣ್ ಕುಮಾರ್, ದ್ವಾರಕೀಶ್ ಸೇರಿದಂತೆ ಅನೇಕ ಚಿತ್ರರಂಗದ ಮೇರು ನಟರ ಜೊತೆ ನಟಿಸಿದ್ದ ಬಿ ಜಯಾ ಸರಿ ಸುಮಾರು ಮೂರು ತಲೆಮಾರುಗಳ ನಟರೊಂದಿಗೆ ನಟಿಸಿದ ಖ್ಯಾತಿ ಕೂಡ ಇವರಿಗೆ ಇದೆ.