Breaking NewsLatestಜಿಲ್ಲಾ ಸುದ್ದಿತುಮಕೂರು

ತ್ರಿವಿಧ ದಾಸೋಹ ಸಿದ್ಧಾಂತ ಸಾರಿದ ಶ್ರೀ ಶಿವಕುಮಾರ್ ಸ್ವಾಮೀಜಿ

ತುಮಕೂರು: ನಡೆದಾಡುವ ದೇವರು ಶ್ರೀ ಶಿವಕುಮಾರ್ ಸ್ವಾಮೀಜಿ 115ನೇ ಜನ್ಮದಿನೋತ್ಸವ ಹಿನ್ನೆಲೆ ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ, ಡಾ. ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದಿದ್ದಾನೆ. ನಾನು ಮೂರು ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ. ಹೊಸ ಚೇತನ, ಉತ್ಸಾಹದೊಂದಿಗೆ ಇಲ್ಲಿಂದ ವಾಪಸ್ ಹೋಗಿದ್ದೆ. ಬಸವಣ್ಣನವರ ತತ್ವವನ್ನು ಪಸರಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂದು ಅಟಲ್ ಜಿ ಹೇಳಿದ್ದರು. ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ, ತ್ರಿವಿಧ ದಾಸೋಹದ ಸಿದ್ಧಾಂತದ ಸಂದೇಶವನ್ನು ಮಠ ಸಾರಿದೆ. ಇಲ್ಲಿಗೆ ಯಾರೇ ಬಂದರೂ ಊಟ ಮಾಡದೆ ವಾಪಸ್ ಹೋಗಿಲ್ಲ ಎಂದು ಹೃದಯ ತುಂಬಿ ಶ್ರೀಗಳನ್ನ ಮತ್ತು ಮಠವನ್ನ ಕೊಂಡಾಡಿದರು.

Spread the love

Related Articles

Leave a Reply

Your email address will not be published.

Back to top button