ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ; ವೈರಲ್ ಆದ ಮಗುವಿನ ಪೋಟೋ

ಧಾರವಾಡ : ವಾಣಿಜ್ಯ ನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನವಾಗಿದೆ. ಈ ಮಗುವಿನ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಕಳೆದ ಭಾನುವಾರ ಈ ಮಗವಿನ ಜನನವಾಗಿದ್ದು, ಹೇರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯೊಬ್ಬರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಆಸ್ಪತ್ರೆಗೆ ದಾಖಲಾದ ಕೆಲವೇ ಘಂಟೆಗಳಲ್ಲಿ ಸಿಜರೀನ್ ಮುಖಾಂತರ ವೈದ್ಯರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಆದರೆ ಮಗುವಿನ ಒಂದೇ ಕಾಲು ನೋಡಿ ವೈದ್ಯರು ಒಂದು ಕ್ಷಣ ದಂಗಾಗಿದ್ದರು. ನಾವೇನಾದರೂ ಹೆಚ್ಚುಕಮ್ಮಿ ಮಾಡಿದೇವಾ ಎಂಬ ಆತಂಕದಲ್ಲಿ ಮಗುವನ್ನು ಪರಿಶೀಲನೆ ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಮಗು ಜನಿಸಿದ್ಧು, ಒಂದೆ ಕಾಲನ ಮಗು ಎಂದು ಖಚಿತವಾಗಿದೆ. ಇನ್ನೂ ಅಪರೂಪದ ಮಗುವಿನ ಜನನ ವೈದ್ಯರಿಗೆ ಆಶ್ಚರ್ಯ ಉಂಟು ಮಾಡಿದ್ದು, ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲವಾಗಿವೆ.
ಇನ್ನು ಹಳೇ ಹುಬ್ಬಳ್ಳಿಯ ಕೋಳೆಕಾರ ಪ್ಲಾಟ್ ನಿವಾಸಿ ದಂಪತಿಗಳಿಗೆ ಈ ಮಗು ಜನಿಸಿದ್ದು, ಗರ್ಭಿಣಿ ಮಹಿಳೆಗೆ ಏಳು ತಿಂಗಳಲ್ಲಿ ಹೆರಿಗೆ ಕಾಣಿಸಿಕೊಂಡಿತ್ತು, ಹಾಗಾಗಿ ಕಳೆದಜೂನ 20 ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು, ಈ ಹಿನ್ನೆಲೆಯಲ್ಲಿ ಕಿಮ್ಸ್ ವೈದ್ಯರು ಮಹಿಳೆಗೆ ಸೀಜೆರೆಯನ್ ಮಾಡಿ ಮಗುವನ್ನು ಹೊರತೆಗೆದಿದ್ದು, ಸಮಯಕ್ಕಿಂತ ಮುಂಚೆಯೇ ಹೆರಿಗೆ ಆಗಿದ್ದರಿಂದ ಇದರಿಂದ ಸಹಜವಾಗಿ ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿರಬಹುದು ಎಂಬ ಮಾತುಗಳು ವೈದ್ಯರಿಂದ ಕೇಳಿಬರುತ್ತಿವೆ. ಅಲ್ಲದೆ ಜನನವಾದ ಬಳಿಕ ಮಗು ಸ್ವಲ್ಪ ಹೊತ್ತಿಗೆ ಮೃತಪಟ್ಟಿದ್ದು, ಈಗ ಮಗುವಿನ ಪೋಟೋ ಸಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.