Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಚುನಾವಣಾ ಪ್ರಚಾರದಲ್ಲಿ ರವೀಂದ್ರ ಜಡೇಜಾಗೆ ಅಕ್ಕನ ಸವಾಲು

ಜಾಮ್‌ನಗರ: ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಅವರ ಅಕ್ಕ ನೈನಾ ಜಡೇಜಾ ಅವರು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎರಡು ಭಿನ್ನ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರವೀಂದ್ರ ಜಡೇಜಾ ಅವರು ಜಾಮ್‌ನಗರದಲ್ಲಿ ಇತ್ತೀಚೆಗೆ ರೋಡ್ ಶೋ ನಡೆಸಿದರು.

ಅವರ ಹೆಂಡತಿ ರಿವಾ ಜಡೇಜಾ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ಆದರೆ, ನೈನಾ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಹಾಲಿ ಶಾಸಕ ಧರ್ಮೇಂದ್ರಸಿಂಹ ಜಡೇಜಾ ಅವರನ್ನು ಕೈಬಿಟ್ಟು ರಿವಾ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಿಪೇಂದ್ರಸಿಂಹ ಪರವಾಗಿ ನೈನಾ ಅವರು ಪ್ರಚಾರ ಮಾಡಿದ್ದಾರೆ. ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ನೈನಾ ಅವರು ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಟಿಕೆಟ್‌ ಸಿಕ್ಕಿಲ್ಲ. ಬಿಜೆಪಿ ರಿವಾ ಅವರನ್ನುಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಳಿಕ ನೈನಾ ಅವರು ಇಲ್ಲಿ ಮುಖ್ಯ ಪ್ರಚಾರಕಿ ಆಗಿದ್ದಾರೆ.

‘ನನಗೆ ನನ್ನದೇ ಸಿದ್ಧಾಂತ ಇದೆ. ನಾನು ಮೆಚ್ಚುವ ಪಕ್ಷದಲ್ಲಿ ಈಗ ಇದ್ದೇನೆ’ ಎಂದು ನೈನಾ ಅವರು ಹೇಳಿದ್ದಾರೆ. ಬೆಲೆ ಏರಿಕೆಯ ವಿಚಾರದಲ್ಲಿ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿ ಭರವಸೆಗಳನ್ನು ನೀಡುತ್ತದೆಯೇ ಹೊರತು ಅದನ್ನು ಈಡೇರಿಸುವುದಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

ಕ್ಷೇತ್ರವು ಬಹುತೇಕ ನಗರ ಪ್ರದೇಶಗಳನ್ನೇ ಒಳಗೊಂಡಿದೆ. ಇಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್‌ ಅಚ್ಚರಿ ಮೂಡಿಸುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್‌ನ ಕೆಲವು ಮುಖಂಡರ ನಂಬಿಕೆ.

Spread the love

Related Articles

Leave a Reply

Your email address will not be published. Required fields are marked *

Back to top button