Breaking NewsLatestಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿ

ಮೊದಲ ಬಾರಿಗೆ ರಾಜಕೀಯ ವೇದಿಕೆ ಮೇಲೆ ಕಾಣಿಸಿಕೊಂಡ ಶ್ರೀರಾಮುಲು ಪುತ್ರ

ಮೊದಲ ಬಾರಿಗೆ ರಾಜಕೀಯ ವೇದಿಕೆ ಮೇಲೆ ಸಾರಿಗೆ ಸಚಿವ ಶ್ರೀರಾಮುಲು ಅವರ ಪುತ್ರ ಕಾಣಿಸಿಕೊಂಡಿದ್ದಾರೆ. ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಪರಿಶಿಷ್ಟ ಪಂಗಡದ ರಾಜ್ಯ ಮಟ್ಟದ ನವಶಕ್ತಿ ಸಮಾವೇಶದ ವೇದಿಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪುತ್ರ ಧನುಷ್‌ನನ್ನು ಬಿ.ಶ್ರೀರಾಮುಲು ಪರಿಚಯಿಸಿದ್ದು ಎಲ್ಲರ ಗಮನ ಸೆಳೆಯಿತು‌.

ಸಚಿವ ರಾಮುಲು ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಸೇರಿ ನಾಲ್ವರು ಮಕ್ಕಳಿದ್ದಾರೆ. ಇವರಲ್ಲಿ ಮೂರನೇಯನಾದ ಧನುಷ್ ಸದ್ಯ ಬ್ರಿಟನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಪ್ರಥಮ ಬಾರಿಗೆ ಪರಿಶಿಷ್ಟ ಪಂಗಡದ ಸಮಾವೇಶದ ವೇದಿಕೆಗೆ ಮಗ ಧನುಷ್ ಕರೆತಂದು ಪರಿಚಯಿಸಿದ್ದು, ಎಲ್ಲರ ಆಶ್ಚರ್ಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಎಂದೂ ರಾಜಕೀಯ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತರದ ಸಚಿವರು, ಇಂದು ಮಗನನ್ನು ಕರೆತಂದಿದ್ದು ಏಕೆ? ತಮ್ಮ ಸಮಾಜದ ಜನರಿಗೆ ಮುಖ ಪರಿಚಯ ಮಾಡಿಸುವುದ್ದಕ್ಕಾಗಿಯೇ? ತಮ್ಮ ಪಕ್ಷದ ಹಿರಿಯ ನಾಗರಿಕರಿಗೆ ಪರಿಚಯಿಸುವ ಉದ್ದೇಶವೇ? ಅಥವಾ ಭವಿಷ್ಯತ್‌ನಲ್ಲಿ ರಾಜಕೀಯಕ್ಕೆ ಈಗಿನಿಂದಲೇ ಮುಖ ಪರಿಚಯಿಸುವ ಉದ್ದೇಶವೇ? ಎಂಬಿತ್ಯಾದಿ ಚರ್ಚೆಗಳು ಮುನ್ನಲೆಗೆ ಬಂದಿದವೆ.

Spread the love

Related Articles

Leave a Reply

Your email address will not be published.

Back to top button