Breaking Newsರಾಷ್ಟ್ರೀಯ
ಬಲವಂತದ ಲಸಿಕೆ ಮೂಲಭೂತ ಹಕ್ಕು ಕಸಿದುಕೊಂಡಂತೆ: ಮೇಘಾಲಯ ಹೈಕೋರ್ಟ್

ಯಾವುದೇ ವ್ಯಕ್ತಿಯು ಲಸಿಕೆ ಪಡೆಯುವುದಕ್ಕೆ ನಿರಾಕರಿಸಿದಾಗ ಅಂಥವರಿಗೆ ಬಲವಂತವಾಗಿ ಲಸಿಕೆ ನೀಡುವುದು ಇಲ್ಲವೇ ಅದನ್ನು ಕಡ್ಡಾಯವಾಗಿ ಪಡೆಯುವಂತೆ ಮಾಡುವುದು ಮನುಷ್ಯನ ಮೂಲಭೂತ ಹಕ್ಕುನ್ನು ಕಸಿದುಕೊಂಡಂತೆ ಎಂದು ಮೇಘಾಲಯದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೇಘಾಲಯದ ನಗರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತ, ಅಂಗಡಿ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ವಹಿವಾಟು ನಡೆಸುವವರು, ಟ್ಯಾಕ್ಸಿ ಚಾಲಕರುಗಳಿಗೆ ಕೋವಿಡ್ ಲಸಿಕೆ ಪಡೆದವರು ಮಾತ್ರ ವಹಿವಾಟು ನಡೆಸಬಹುದು ಎಂಬ ಆದೇಶ ನೀಡಿತ್ತು.
ಅಲ್ಲಿನ ಸ್ಥಳೀಯ ಆಡಳಿತದ ಕ್ರಮವನ್ನು ಪ್ರಶಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಲಸಿಕೆ ಕಡ್ಡಾಯಗೊಳಿಸುವುದು ಮನುಷ್ಯನ ಮೂಲಭೂತ ಹಕ್ಕುಗಳ ವಿರೋಧಿ ನಡೆಯಾಗುವುದು ಎಂದು ಅಭಿಪ್ರಾಯಪಟ್ಟಿದೆ.