Breaking NewsLatestಜಿಲ್ಲಾ ಸುದ್ದಿಬೆಂಗಳೂರು
ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ವಸಿಷ್ಠ-ಹರಿಪ್ರಿಯಾ; ಎತ್ತ ಹಾರಲಿವೆ ಈ ಸ್ಯಾಂಡಲ್ ವುಡ್ ಲವ್ ಬರ್ಡ್ಸ್?

ಬೆಂಗಳೂರು: ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸ್ಯಾಂಡಲ್ ವುಡ್ ನ ಹೊಸ ಲವ್ ಬರ್ಡ್ಸ್ ಗಳು ಇಂದು ಏರ್ ಫೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ವಸಿಷ್ಠ ಮತ್ತು ಹರಿಪ್ರಿಯಾ ಮದುವೆ ಆಗ್ತಾರೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.
ವಸಿಷ್ಠ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದು, ಶೀಘ್ರವೇ ವಿವಾಹ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಈ ಇಬ್ಬರ ಮದುವೆ ಸುದ್ದಿಗೆ ಪುಷ್ಠಿ ಕೊಡುವಂತೆ ವಸಿಷ್ಠ ಮತ್ತು ಹರಿಪ್ರಿಯಾ ಕೈಕೈ ಹಿಡಿದು ಒಟ್ಟಿಗೆ ಹೆಜ್ಜೆ ಹಾಕಿರುವ ಫೋಟೋಗಳು ವೈರಲ್ ಆಗಿವೆ. ಈ ಪೋಟೊಗಳು ಇವರಿಬ್ಬರ ಪ್ರೇಮವನ್ನು ಖಚಿತಪಡಿಸುತ್ತಿವೆ. ವಿದೇಶಕ್ಕೆ ಒಟ್ಟಿಗೆ ಹಾರಿರುವ ವಸಿಷ್ಠ ಮತ್ತು ಹರಿಪ್ರಿಯಾ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿರು ಫೋಟೋಗಳು ವೈರಲ್ ಆಗಿವೆ.