Kalburgi Murder: ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ

ಕಲಬುರ್ಗಿ: ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕತ್ತು ಕೊಯ್ದು ಭೀಕರ ಕೊಲೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ನಗರದ ನೂರಾನಿ ಕಾಲೋನಿ ನಿವಾಸಿ ಶಹನಾ ಬೇಗಂ (36) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಶಹನಾ ಬೇಗಂ ಮತ್ತು ವಸಿಂ ಅಕ್ರಂ ಮಧ್ಯ ಕಳೆದ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇಬ್ಬರು ಲಿವಿಂಗ್ ಟುಗೆಧರ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಶಹನಾಗೆ ನಾಲ್ಕು ಜನ ಮಕ್ಕಳಿದರೂ ತನ್ನ ಗಂಡ ದೂರದ ದುಬೈಗೆ ದುಡಿಯೊಕ್ಕೆ ಹೋಗಿದ್ದ. ಆದರೆ, ಹಲವಾರು ವರ್ಷ ಆತ ಅಲ್ಲೆ ವಾಸ ಮಾಡಿದ್ದರಿಂದ ಪತ್ನಿ ಶಹನಾ ಬೇಗಂ ಮಗನ ವಯಸ್ಸಿನ ಯುವಕರ ಸಂಘಕ್ಕೆ ಬಿದ್ದಿದ್ದಳು ಎನ್ನಲಾಗಿದೆ. ಅಲ್ಲದೆ ಶಹನಾ ಮತ್ತು ಆಕೆಯ ಮಕ್ಕಳ ಜೊತೆ ವಸಿಂ ಅಕ್ರಂ ಕೂಡಾ ವಾಸವಾಗಿದ್ದ.
ಆದರೆ, ನಿನ್ನೆ ಅದೇನಾಯೊ ಗೊತ್ತಿಲ್ಲ. ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಹೊರಗಿನಿಂದ ಬಂದ ವಸಿಂ ಮತ್ತು ಶಹನಾಳ ನಡುವೆ ಗಲಾಟೆ ಯಾಗಿ ಶಹನಾಳ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇತ್ತ ತಂದೆ ದೂರದ ದುಬೈ ನಲ್ಲಿ ಇದ್ರೆ ತಾಯಿ ಬಾರದ ಲೋಕಕ್ಕೆ ತೆರಳಿದ್ದಾಳೆ. ತಂದೆ ತಾಯಿ ಇಲ್ಲದೆ ನಾಲ್ಕು ಜನ ಮಕ್ಕಳು ಅನಾಥರಾಗಿದ್ದು ದುರಂತ. ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಠಾಣೆ ಪೊಲೀಸರು ಆರೋಪಿ ವಸಿಂ ಪತ್ತೆಗೆ ಬಲೆ ಬೀಸಿದ್ದಾರೆ.