ಬೆಂಗಳೂರಿನಲ್ಲಿ ಇಳಿಮುಖ; ಗ್ರಾಮೀಣ ಕರ್ನಾಟಕದಲ್ಲಿನ ಕೋವಿಡ್ ಪ್ರಕರಣಗಳು ಕಳವಳಕಾರಿ

ಬೆಂಗಳೂರಿನಲ್ಲಿ ಇಳಿಮುಖ; ಗ್ರಾಮೀಣ ಕರ್ನಾಟಕದಲ್ಲಿನ ಕೋವಿಡ್ ಪ್ರಕರಣಗಳು ಕಳವಳಕಾರಿ
ಬೆಂಗಳೂರು: ಕೋವಿಡ್ ಎರಡನೇ ಅಲೆ ಆಘಾತಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡಿದ್ದರೂ, ನಿರಾಳವಾಗಿಬಿಡುವ ಸಂದರ್ಭ ಇದಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ವರದಿಯಾದ ಹೊಸ ಪ್ರಕರಣಗಳಲ್ಲಿ 6,243 ಪ್ರಕರಣಗಳು ಬೆಂಗಳೂರಿನಿಂದ ಬಂದಿವೆ. ಬಿಗಿ ಕ್ರಮಗಳೊಂದಿಗೆ ಲಾಕ್ಡೌನ್ ಮುಂದುವರಿದಿದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ. ಹೆಚ್ಚಿನ ಜಿಲ್ಲೆಗಳು ಮತ್ತು ಬೆಂಗಳೂರಿನಲ್ಲಿ ಸಂಖ್ಯೆ ಕಡಿಮೆಯಾಗಿದೆ. ಸಂಖ್ಯೆ ತೀವ್ರವಾಗಿ ಇಳಿದರೆ ಆಗ ನಾವು ಲಾಕ್‌ಡೌನ್‌ ಕೊನೆಗೊಳಿಸಬಹುದು ಎಂಬ ಅಭಿಪ್ರಾಯವನ್ನು ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಆದರೆ, ಕಳವಳಕಾರಿ ಸಂಗತಿಯೆಂದರೆ, ವೈರಸ್ ಈಗ ಗ್ರಾಮೀಣ ಕರ್ನಾಟಕದಲ್ಲಿ ಹೆಚ್ಚಾಗಿರುವುದು ಮತ್ತು ಅದಕ್ಕೆ ತಕ್ಕಂತೆ ವೈದ್ಯಕೀಯ ಮೂಲಭೂತ ಸೌಕರ್ಯ ಇಲ್ಲದಿರುವುದು ಎಂಬ ಅಭಿಪ್ರಾಯ ಕೇಳಿಬಂದಿದೆ.