ಯಡ್ಯೂರಪ್ಪ ಬದಲಾವಣೆಗೆ ಮತ್ತೆ ಯತ್ನ; ದೆಹಲಿ ತಲುಪಿದ್ದಾರೆ 20 ಶಾಸಕರು?

ಯಡ್ಯೂರಪ್ಪ ಬದಲಾವಣೆಗೆ ಮತ್ತೆ ಯತ್ನ; ದೆಹಲಿ ತಲುಪಿದ್ದಾರೆ 20 ಶಾಸಕರು?
ಮುಖ್ಯಮಂತ್ರಿ ಯಡ್ಯೂರಪ್ಪ ಬದಲಾವಣೆಗೆ ಮತ್ತೆ ಯತ್ನ ನಡೆದಿದೆ. ಸತತವಾಗಿ ಯಡ್ಯೂರಪ್ಪ ವಿರಯದ್ಧ ನಡೆಯುತ್ತಿರುವ ಷಡ್ಯಂತ್ರವು ಈಗ ಕೊರೊನಾ ಇಕ್ಕಟ್ಟಿನ ಹೊತ್ತಿನಲ್ಲೇ ಮತ್ತೆ ಕ್ರಿಯಾಶೀಲವಾಗಿದ್ದು, ದೆಹಲಿಯಲ್ಲಿ 20ಕ್ಕೂ ಹೆಚ್ಚು ಶಾಸಕರು ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಸಚಿವ ಯೋಗೀಶ್ವರ್, ಶಾಸಕ ಬೆಲ್ಲದ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿದ್ದು ಹೊಸ ಕಾರ್ಯತಂತ್ರ ರೂಪಿಸುತ್ತಿದ್ಧಾರೆ ಎನ್ನಲಾಗಿದೆ. ಯಡ್ಯೂರಪ್ಪನವರನ್ನು ಕೆಳಗಿಳಿಸುವ ಯತ್ನದ ಹಿಂದೆ ಬಿಎಲ್ ಸಂತೋಷ್ ಅವರೇ ಇದ್ದಾರಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.